Home ದಾವಣಗೆರೆ ಗ್ಯಾಸ್ ಇ-ಕೆವೈಸಿ ಮಾಡಿಸದಿದ್ದರೆ ಸಿಗಲ್ಲ ಸಬ್ಸಿಡಿ ಸಿಲಿಂಡರ್: ಅಕ್ಟೋಬರ್ 1 ರೊಳಗೆ ಈ ಕೆಲಸ ತಪ್ಪದೇ ಮಾಡಿ
ದಾವಣಗೆರೆನವದೆಹಲಿಬೆಂಗಳೂರು

ಗ್ಯಾಸ್ ಇ-ಕೆವೈಸಿ ಮಾಡಿಸದಿದ್ದರೆ ಸಿಗಲ್ಲ ಸಬ್ಸಿಡಿ ಸಿಲಿಂಡರ್: ಅಕ್ಟೋಬರ್ 1 ರೊಳಗೆ ಈ ಕೆಲಸ ತಪ್ಪದೇ ಮಾಡಿ

Share
ಸಿಲಿಂಡರ್
Share

ಬೆಂಗಳೂರು: ಅಕ್ಟೋಬರ್ 1 ರಿಂದ ಪ್ರಮುಖ ಹಣಕಾಸು ನಿಯಮಗಳ ಜೊತೆಗೆ ಗೃಹ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ ಸಬ್ಸಿಡಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಜಾರಿಗೆ ಬರಲಿದೆ. ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಯಾರಿಗೆ ಈ ಇ-ಕೆವೈಸಿ/ಬಯೋಮೆಟ್ರಿಕ್ ಕಡ್ಡಾಯ?

ಸಬ್ಸಿಡಿ ದರದಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪಡೆಯಲು ಬಯಸುವ ಎಲ್ಲಾ ಗ್ರಾಹಕರು ಈ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಬೇಕು. ಈಗಾಗಲೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಮಾಡಿಸುವ ಅಗತ್ಯವಿಲ್ಲ.

ಇ-ಕೆವೈಸಿ ಆಗಿದೆ ಇಲ್ಲವೇ ಎಂದು ಪರಿಶೀಲಿಸುವುದು ಹೇಗೆ?

ಗ್ರಾಹಕರು ತಮ್ಮ ತೈಲ ಸರಬರಾಜು ಕಂಪನಿಯ (OMC) ಅಧಿಕೃತ ಮೊಬೈಲ್ ಆಪ್ ಮೂಲಕ ಪರಿಶೀಲಿಸಬಹುದು:

Indane ಗ್ರಾಹಕರು: IndianOil ONE ಆಪ್

Bharatgas ಗ್ರಾಹಕರು: HelloBPCL ಆಪ್

HP Gas ಗ್ರಾಹಕರು: HP PAY ಆಪ್

ಆಪ್‌ನಲ್ಲಿ ಸ್ಪಷ್ಟವಾಗಿ ತಿಳಿಯದಿದ್ದರೆ, ನಿಮ್ಮ ಸ್ಥಳೀಯ ಗ್ಯಾಸ್ ಏಜೆನ್ಸಿ/ವಿತರಕರನ್ನು ಸಂಪರ್ಕಿಸಿ ದೃಢೀಕರಿಸಿಕೊಳ್ಳಬಹುದು.

ಬಯೋಮೆಟ್ರಿಕ್ ಪೂರ್ಣಗೊಳಿಸಲು 3 ಸುಲಭ ಮಾರ್ಗಗಳು:

ಡೆಲಿವರಿ ಸಮಯದಲ್ಲಿ: ನಿಮ್ಮ ಮನೆಗೆ ಸಿಲಿಂಡರ್ ನೀಡಲು ಬರುವ ಡೆಲಿವರಿ ಸಿಬ್ಬಂದಿಯ ಮೊಬೈಲ್ ಆಪ್ ಮೂಲಕ ಬೆರಳಚ್ಚು ನೀಡಿ ಪೂರ್ಣಗೊಳಿಸಬಹುದು.

ಗ್ಯಾಸ್ ಏಜೆನ್ಸಿಯಲ್ಲಿ: ನಿಮ್ಮ ಗ್ಯಾಸ್ ವಿತರಕರ ಶೋರೂಂಗೆ ತೆರಳಿ ನೇರವಾಗಿ ಬಯೋಮೆಟ್ರಿಕ್ ಮಾಡಿಸಬಹುದು.

ಮೊಬೈಲ್ ಆಪ್ ಮೂಲಕ: ಕಂಪನಿಯ ಅಧಿಕೃತ ಆಪ್ ಬಳಸಿ ಸ್ವತಃ ಇ-ಕೆವೈಸಿ ಪ್ರಕ್ರಿಯೆ ಮುಗಿಸಬಹುದು.

ಅಕ್ಟೋಬರ್ 1ರ ಗಡುವು ತಪ್ಪಿದರೆ ಏನಾಗುತ್ತದೆ?

ಬಯೋಮೆಟ್ರಿಕ್ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣ ಬಂದ್ ಆಗುವುದಿಲ್ಲ. ಆದರೆ, ಅವರಿಗೆ ಸರ್ಕಾರ ನೀಡುವ ಸಬ್ಸಿಡಿ ದರ ಸಿಗುವುದಿಲ್ಲ. ಬದಲಾಗಿ ಪೂರ್ಣ ಮಾರುಕಟ್ಟೆ ಬೆಲೆಯಲ್ಲಿ (Unsubsidised Market Price) ಸಿಲಿಂಡರ್ ಖರೀದಿಸಬೇಕಾಗುತ್ತದೆ.

ಈ ನಿಯಮ ಜಾರಿಗೆ ತರುತ್ತಿರುವುದು ಏಕೆ?

ಅರ್ಹ ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ತಲುಪಿಸಲು, ನಕಲಿ ಹಾಗೂ ಬೋಗಸ್ ಕನೆಕ್ಷನ್‌ಗಳನ್ನು ತಡೆಯಲು ಮತ್ತು ಗೃಹ ಬಳಕೆಯ ಸಬ್ಸಿಡಿ ಸಿಲಿಂಡರ್‌ಗಳನ್ನು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಗಳಿಗೆ ಅಕ್ರಮವಾಗಿ ಬಳಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ನೇರ ನೆರವಿಗಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಉಚಿತ ಸಹಾಯವಾಣಿ ಸಂಖ್ಯೆ 1800-2333-555 ಅನ್ನು ಸಂಪರ್ಕಿಸಬಹುದು.

Share

Leave a comment

Leave a Reply

Your email address will not be published. Required fields are marked *