SUDDIKSHANA KANNADA NEWS/DAVANAGERE/DATE:25_11_2025
ದಾವಣಗೆರೆ: ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದು, ಎಪಿಎಂಸಿ ಸಹಾಯಕ ನಿರ್ದೇಶಕನ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ.
READ ALSO THIS STORY: ದಾವಣಗೆರೆಯಿಂದ ಮಂತ್ರಾಲಯಕ್ಕೆ ಹವಾ ನಿಯಂತ್ರಿತ ವೋಲ್ವೋ ಸಾರಿಗೆ ಸೇವೆ ಪ್ರಾರಂಭ
ದಾವಣಗೆರೆ ಎಪಿಎಂಸಿಯಲ್ಲಿ ಕೃಷಿ-ಮಾರಾಟ ವಿಭಾಗದ ಸಹಾಯಕ ನಿರ್ದೇಶಕರೂ ಆಗಿರುವ ಆಗಿರುವ ಪ್ರಭು ಜೆ. ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ.
ದಾವಣಗೆರೆ ನಗರದ ಆಂಜನೇಯ ಬಡಾವಣೆಯ 12 ಕ್ರಾಸ್ ನಲ್ಲಿ ಇರುವ ಪ್ರಭು ಜೆ ಮನೆ ಮೇಲೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಡಿಎಸ್ಪಿ ಕಲಾವತಿ ಹಾಗೂ ಇನ್ಸ್ ಪೆಕ್ಟರ್ ಗುರು ಬಸವರಾಜ್ ತಂಡವು ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.
ಹಲವು ವರ್ಷಗಳಿಂದ ದಾವಣಗೆರೆಯಲ್ಲಿಯೇ ಸೇವೆಯಲ್ಲಿರುವ ಪ್ರಭು ಜೆ. ದಾವಣಗೆರೆ ನಗರದ ಆಂಜನೇಯ ಬಡಾವಣೆಯ ಎರಡು ಅಂತಸ್ತಿನ ಮನೆ, ಐದು ಲಕ್ಷ ರೂಪಾಯಿ ನಗದು, ಚಿನ್ನ ಬೆಳ್ಳಿ ಲೋಕಾಯುಕ್ತರ ದಾಳಿ ವೇಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಬೇರೆ ಬೇರೆ ಕಡೆಗಳಲ್ಲಿ ನಿವೇಶನ ಖರೀದಿ ಮತ್ತು ಜಮೀನು ಖರೀದಿಸಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ದಾಖಲಾತಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.






Leave a comment