Site icon Kannada News-suddikshana

ಎಕ್ಸಿಟ್ ಪೊಲ್ಸ್ ಪ್ರಕಾರ ಮೋದಿ ಹ್ಯಾಟ್ರಿಕ್: ವರದಿಗಳ ಬೆನ್ನಲ್ಲೇ ಷೇರು ಮಾರುಕಟ್ಟೆ ಏರಿಕೆ ನಿರೀಕ್ಷೆ!

ಮುಂಬಯಿ: ಕಳೆದ ವಾರ ಸಾಕಷ್ಟು ಏರುಪೇರಿನಿಂದ ಕೂಡಿದ್ದ ಷೇರು ಮಾರುಕಟ್ಟೆ, ರೂಪಾಯಿ ಮೌಲ್ಯ ಮತ್ತು ಬಾಂಡ್‌ ಮೌಲ್ಯಗಳು ಸೋಮವಾರ ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಹುಟ್ಟಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿದ್ದು, ಷೇರುಪೇಟೆ ಏರಿಕೆ ಹಾದಿಗೆ ಮರಳಬಹುದು ಎನ್ನಲಾಗಿದೆ.

ಫ‌ಲಿತಾಂಶ ಬಾಕಿ ಇದ್ದ ಕಾರಣ ವಿದೇಶಿ ಹೂಡಿಕೆ ದಾರರು ಎಚ್ಚರಿಕೆಯಿಂದ ಹೂಡಿಕೆ ಮಾಡಿದ್ದರು. ಹೀಗಾಗಿ ಷೇರುಪೇಟೆ ಕುಸಿತ ಕಂಡಿತ್ತು. ಈಗ ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಿಫ್ಟಿ 23,000ದಿಂದ 23,400 ಅಂಕಗಳಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಫ‌ಲಿತಾಂಶದ ದಿನ ಇದು ಇನ್ನೂ ಏರಿಕೆಯಾಗಬಹುದು ಎನ್ನಲಾಗಿದೆ. ಮುಂದಿನ 5 ವರ್ಷಗಳಲ್ಲಿ ಸರಕಾರ ಕೈಗೊಳ್ಳುವ ಯೋಜನೆಗಳು ಹೂಡಿಕೆದಾರರಿಗೆ ಸಹಾಯಕವಾಗುವ ಕಾರಣಕ್ಕೆ ಹೂಡಿಕೆ ಪ್ರಮಾಣ ಹೆಚ್ಚಾಗಬಹುದು ಎನ್ನಲಾಗಿದೆ. 2023-24ರ ಜಿಡಿಪಿ ಶೇ.8.2ರ ಪ್ರಗತಿ ಸಾಧಿಸಿದ್ದು ಕೂಡ ಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು ಎನ್ನಲಾಗಿದೆ.

Exit mobile version