Site icon Kannada News-suddikshana

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಆಯೋಜಕರಿಗೆ ಮಾಹಿತಿ: ಆ.27, 28, ಮತ್ತು 31ಕ್ಕೆ ಗಣೇಶ ವಿಗ್ರಹಗಳ ವಿಸರ್ಜನೆಗೆ ಸ್ಥಳ ನಿಗದಿ

ಗಣೇಶ

SUDDIKSHANA KANNADA NEWS/ DAVANAGERE/DATE:26_08_2025

ದಾವಣಗೆರೆ: ನಗರದಾದ್ಯಂತ ಆ.27, 29, ಮತ್ತು 31 ರಂದು ಗಣೇಶ ವಿಗ್ರಹಗಳ ವಿಸರ್ಜನೆಗೆ ಪಾಲಿಕೆ ವತಿಯಿಂದ ತಾತ್ಕಾಲಿಕ ವಿಸರ್ಜನಾ ವ್ಯವಸ್ಥಗೆ ಸ್ಥಳ ನಿಗದಿಪಡಿಸಲಾಗಿದೆ.

READ ALSO THIS STORY: IBPSನಲ್ಲಿ ಭಾರೀ ಉದ್ಯೋಗಾವಕಾಶ, ಕ್ಲರ್ಕ್ ಅಧಿಸೂಚನೆ 2025:10277 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಸಾರ್ವಜನಿಕರು, ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಭಕ್ತರು ಪಾಲಿಕೆ ನಿಗದಿಪಡಿಸಿದ ಸ್ಥಳಗಳಲ್ಲಿಯೇ ವಿಸರ್ಜಿಸಲು ಸೂಚಿಸಿದೆ.

ನಗರದಲ್ಲಿ ನಿಗದಿಪಡಿಸಲಾದ ಸ್ಥಳಗಳು: ಹಗೆದಿಬ್ಬ ವೃತ್ತ ಗಾಂಧಿನಗರ, ರಾಜಕುಮಾರ ಶಾಲೆ ಹತ್ತಿರ ಕುರುಬರ ಕೇರಿ, ಹೊಂಡದ ಸರ್ಕಲ್, ಮೈಲಾರ ಲಿಂಗೇಶ್ವರ ದೇವಸ್ಥಾನದ ಹತ್ತಿರ ಕೊಂಡಜ್ಜಿ ರಸ್ತೆ, ಕೋರ್ಟ್ ಮುಂಭಾಗ ದೇವರಾಜ ಅರಸು ಬಡಾವಣೆ, ಶಿವಾಜಿ ವೃತ್ತ ದುರ್ಗಾಂಬಿಕಾ ದೇವಸ್ಥಾನದ ಹತ್ತಿರ ಕುರುಬರ ಕೇರಿ, ವೆಂಕಟೇಶ್ವರ ವೃತ್ತ ಬೇತೂರು ರಸ್ತೆ, ವಿಠಲ ಮಂದಿರ ಹತ್ತಿರ ಮಹಾರಾಜ ಪೇಟೆ, ಹಾಸಬಾವಿ ವೃತ್ತದ ಚೌಕಿಪೇಟೆ, ವಿನೋಬ ನಗರ 3ನೇ ಮುಖ್ಯರಸ್ತೆ ಪಾರ್ಕ್ ಹತ್ತಿರ, ಪಿ.ಜಿ.ಬಡಾವಣೆಯ ರಾಮ್ ಅಂಡ್ ಕೋ ವೃತ್ತ, ಕಾಯಿಪೇಟೆಯ ಬಸವೇಶ್ವರ ವೃತ್ತ, ಬಂಬೂ ಬಜಾರ್ ಗಣೇಶ್ ಹೋಟೆಲ್ ಹತ್ತಿರ, ಎಸ್.ಎಸ್.ಲೇಔಟ್ ಬನ್ನಿಮರದ ಹತ್ತಿರ, ಎಂ.ಸಿಸಿ ಎ ಬ್ಲಾಕ್ ಬಕ್ಕೇಶ್ವರ ಸ್ಕೂಲ್ ಮುಂಭಾಗ, ಕೆ.ಬಿ.ಬಡಾವಣೆಯ ಜಯದೇವ ವೃತ್ತ, ಡಿ.ಸಿ.ಎಂ.ಲೇಔಟ್‍ನ ಡಿಸಿಎಂ ಲೇಔಟ್ ಸರ್ಕಲ್, ಆವರಗೆರೆ ಸರ್ಕಾರಿ ಶಾಲೆ ಹತ್ತಿರ, ಸರಸ್ವತಿ ಬಡಾವಣೆಯ ಪಂಚಮುಖಿ ಆಂಜನೇಯ ದೇವಸ್ಥಾನ ಹತ್ತಿರ ಸ್ಥಳ ನಿಗದಿಪಡಿಸಲಾಗಿದೆ.

, ಶಿವಕುಮಾರ ಸ್ವಾಮಿ ಬಡಾವಣೆಯ ಸಂಜೀವಿನಿ ಆಂಜನೇಯ ದೇವಸ್ಥಾನ, ನಿಟುವಳ್ಳಿ ದುರ್ಗಾಂಬಿಕ ದೇವಸ್ಥಾನದ ಹತ್ತಿರ ಮತ್ತು ಹೆಚ್.ಕೆ.ಆರ್ ಸರ್ಕಲ್, ಕೆಟಿಜೆ ನಗರ ಡಾಂಗೆ ಪಾರ್ಕ್ ಹತ್ತಿರ, ಕುವೆಂಪು ನಗರದಲ್ಲಿನ ಬಾಪೂಜಿ ಶಾಲೆ ಹತ್ತಿರ, ಎಂ.ಸಿಸಿ ಎ ಬ್ಲಾಕ್ ಗುಂಡಿ ಮಹಾದೇವಪ್ಪ ಸರ್ಕಲ್, ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನದ ಹತ್ತಿರ, ಆಂಜನೇಯ ಬಡಾವಣೆಯ ಆಂಜನೇಯ ದೇವಸ್ಥಾನದ ಹತ್ತಿರ ಮತ್ತು ಬಿ.ಐ.ಇ.ಟಿ ರಸ್ತೆ ಬಾಪೂಜಿ ಬ್ಯಾಂಕ್ ಹತ್ತಿರ, ಶ್ಯಾಮನೂರು ಬಡಾವಣೆ ಶ್ರೀರಾಮ ಮಂದಿರದ ಹ್ತತಿರ ಹಾಗೂ ಕೊಂಡಜ್ಜಿ ರಸ್ತೆ ಆರ್ ಟಿ ಒ ಆಫೀಸ್ ಹತ್ತಿರ ಟ್ರ್ಯಾಕ್ಟರ್ ನಿಲುಗಡೆ ಮಾಡಿದ ಸ್ಥಳ ನಿಗದಿಪಡಿಸಲಾಗಿದೆ.

Exit mobile version