(loan facility:) 2024-25ನೇ ಸಾಲಿನ ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ ಮತ್ತು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕ / ಯುವತಿಯರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತರು ಸೇವ ಸಿಂಧು ಪೊರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಬನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಅಕ್ಟೋಬರ್ 10ರೊಳಗೆ ಸಲ್ಲಿಸಬಹುದು.
ಈ ಅರ್ಹತೆ ಹೊಂದಿರುವುದು ಕಡ್ಡಾಯ:
* 2023-24ನೇ ಸಾಲಿನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವ್ಯಶಕತೆ ಇರುವುದಿಲ್ಲ.
* ನಿಗಮದ ವ್ಯಾಪ್ತಿಗೆ ಒಳಪಡುವ ಉಪಜಾತಿ ಹಾಗೂ ಯೋಜನೆಗಳ ಷರತ್ತು ನಿಬಂಧನೆಗಳಿಗೆ ಒಳಪಡುವ ಫಲಾಪೇಕ್ಷಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
* ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ನಿಯಮಗಳನ್ವಯ ಅವಕಾಶವಿರುವುದಿಲ್ಲ
ಇನ್ನು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ನಗರ ಜಿಲ್ಲೆ #21, ವೆಂಕಟಪ್ಪ ರಸ್ತೆ, ಕ್ರೀನ್ ರಸ್ತೆ, ಟಿಸ್ಮರ್ ಟೌನ್, ಬೆಂಗಳೂರು-560 051 ಅಥವಾ
ಕಲ್ಯಾಣ ಮಿತ್ರ ಏಕೀಕೃತ ಎಸ್.ಸಿ\ಎಸ್.ಟಿ ಸಹಾಯವಾಣಿ ಸಂಖ್ಯೆ : 9482300400 ಗೆ ಸಂಪರ್ಕಿಸಬಹುದಾಗಿದೆ.