Site icon Kannada News-suddikshana

Life Insurance Corporation ಆದಾಯಲ್ಲಿ ಎಷ್ಟು ಇಳಿಕೆ ಆಗಿದೆ ಗೊತ್ತಾ….? ಖಾಸಗಿ ವಲಯದ ಉದ್ಯಮದ ಪ್ರೀಮಿಯಂ ಆದಾಯದಲ್ಲಿ ಹೆಚ್ಚಳ

Life Insurance Corporation

Life Insurance Corporation

SUDDIKSHANA KANNADA NEWS/ DAVANAGERE/ DATE:13-09-2023

ಮುಂಬೈ: ಭಾರತೀಯ ಜೀವ ವಿಮಾ ಉದ್ಯಮವು ಏಪ್ರಿಲ್-ಆಗಸ್ಟ್ 2023 ರ ಅವಧಿಯಲ್ಲಿ ಹೊಸ ವ್ಯವಹಾರದ ಪ್ರೀಮಿಯಂ ಆದಾಯದಲ್ಲಿ 12.33% ಇಳಿಕೆ ಕಂಡಿದೆ.

ಈ ಸುದ್ದಿಯನ್ನೂ ಓದಿ: 

ಚೈತ್ರಕ್ಕ ಇದೇನಕ್ಕ… ಕೋಟ್ಯಂತರ ರೂಪಾಯಿ ವಂಚಿಸಿ ಮೋಸ ಮಾಡಿದ್ದ ಉಗ್ರ ಭಾಷಣಕಾರಿ ಚೈತ್ರಾ ಕುಂದಾಪುರ (Kundapur)ಅಂದರ್ ಆಗಿದ್ದೇಗೆ…?

ಸರ್ಕಾರಿ ಸ್ವಾಮ್ಯದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (Life Insurance Corporation)ನಿಂದ ಉತ್ಪತ್ತಿಯಾಗುವ ಆದಾಯದಲ್ಲಿನ ಕುಸಿತದಿಂದಾದಿ ಖಾಸಗಿ ವಲಯದ ವಿಮಾ ಉದ್ಯಮವು ಅದೇ ಅವಧಿಯಲ್ಲಿ ಪ್ರೀಮಿಯಂ ಆದಾಯದಲ್ಲಿ 14.51% ಹೆಚ್ಚಳವನ್ನು ವರದಿ ಮಾಡಿದೆ. 53,144 ಕೋಟಿ ರೂಪಾಯಿಗೆ ತಲುಪಿದೆ. ಗುಂಪು, ಸಿಂಗಲ್ ಪ್ರೀಮಿಯಂಗಳ ಬೆಳವಣಿಗೆಯ ಮೇಲೆ ಅಪಾಯ ತಂದೊಡ್ಡಿದೆ.

LIC (Life Insurance Corporation)ಯ ಒಟ್ಟಾರೆ ಪ್ರೀಮಿಯಂ ಆದಾಯವು ಅದೇ ಅವಧಿಯಲ್ಲಿ 25% ರಷ್ಟು ಕುಸಿದು 74,156 ಕೋಟಿ ರೂಪಾಯಿಗೆ ತಲುಪಿದೆ. ಆಗಸ್ಟ್‌ನಲ್ಲಿ, ಜೀವ ವಿಮಾ ಉದ್ಯಮದ ಹೊಸ ವ್ಯವಹಾರ ಪ್ರೀಮಿಯಂ 18.46% ರಷ್ಟು ಕಡಿಮೆಯಾಗಿ ₹26,789 ಕೋಟಿಗೆ ತಲುಪಿದೆ ಎಂದು ಲೈಫ್ ಇನ್ಶುರಾನ್‌ನ ಪ್ರಾಥಮಿಕ ಮಾಹಿತಿಯ ಪ್ರಕಾರ ತಿಳಿದು ಬಂದಿದೆ.

ಖಾಸಗಿ ಪಟ್ಟಿ ಮಾಡಲಾದ ವಿಮಾದಾರರಲ್ಲಿ, ಮ್ಯಾಕ್ಸ್ ಲೈಫ್ ಇನ್ಶುರೆನ್ಸ್, ಎಚ್‌ಡಿಎಫ್‌ಸಿ ಲೈಫ್ ಮತ್ತು ಎಸ್‌ಬಿಐ ಲೈಫ್ ಆಗಸ್ಟ್‌ನ ಪ್ರೀಮಿಯಂನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಏರಿಕೆ ಕಂಡಿದೆ. ಆದ್ರೆ, ಸರ್ಕಾರಿ ಸ್ವಾಮ್ಯದ ಎಲ್ ಐ ಸಿ ಕುಸಿತ ಕಂಡಿರುವುದು ಆಘಾತ ತಂದಿದೆ.

STORY SUMMARY:

MUMBAI: The Indian life insurance industry has seen a 12.33% decline in new business premium income during April-August 2023.

Exit mobile version