SUDDIKSHANA KANNADA NEWS/DAVANAGERE/DATE:15_12_2025
ದಾವಣಗೆರೆ: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿಧನ ಹೊಂದಿದ್ದು, ಪಾರ್ಥಿವ ಶರೀರದ ಅಂತಿಮ ಸಾರ್ವಜನಿಕರ ದರ್ಶನಕ್ಕೆ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಹೈಸ್ಕೂಲ್ ಮೈದಾನದಿಂದ ಕಲ್ಲೇಶ್ವರ ಮಿಲ್ ರವರೆಗೆ ವಾಹನದಲ್ಲಿ ಸಾಗಿ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.
READ ALSO THIS STORY: ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪರು ರಾಜ್ಯ ರಾಜಕಾರಣದಲ್ಲಿ ಸೋಲಿಲ್ಲದ ಸರದಾರರಾಗಿದ್ದು ಹೇಗೆ? ಇಂಟ್ರೆಸ್ಟಿಂಗ್ ಸ್ಟೋರಿ
ಈ ಸಂಬಂಧ ದಾವಣಗೆರೆ ನಗರಕ್ಕೆ ವಿವಿಧ ಕಡೆಗಳಿಂದ ಅತಿಗಣ್ಯರು, ಗಣ್ಯರು ಆಗಮಿಸುತ್ತಿದ್ದು ಅಲ್ಲದೇ ವಿವಿಧ ಕಡೆಗಳಿಂದ ಅಭಿಮಾನಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಅಂತಿಮ ದರ್ಶನ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸಾರ್ವಜನಿಕರು ಸಹಕರಿಸಲು ಜಿಲ್ಲಾ ಪೊಲೀಸ್ ವತಿಯಿಂದ ಮನವಿ ಮಾಡಿದೆ.
ಪೊಲೀಸ್ ಬಿಗಿ ಬಂದೋಬಸ್ತ್:
- ಈಗಾಗಲೇ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯರ ಅಂತಿಮ ದರ್ಶನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಸಂಚಾರ ಮಾರ್ಗ ಬದಲಾವಣೆ, ಪಾರ್ಕಿಂಗ್ ಸ್ಥಳಗಳನ್ನು ನಿಗಧಿಪಡಿಸಲಾಗಿರುತ್ತದೆ.
- ಅಂತಿಮ ದರ್ಶನಕ್ಕೆ ಆಗಮಿಸುವ ಅಭಿಮಾನಿಗಳು, ಸಾರ್ವಜನಿಕರು ಭಾವದ್ವೇಗಕ್ಕೆ ಒಳಗಾಗದೇ ಶಾಂತಿಯುತವಾಗಿ ಮಾನ್ಯರ ಅಂತಿಮ ದರ್ಶನ ಪಡೆಯುವುದು
- ಅಂತಿಮ ದರ್ಶನಕ್ಕೆ ಆಗಮಿಸುವ ಎಲ್ಲಾ ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು, ನಿಗಧಿತ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಬೇಕು.
- ಅಂತಿಮ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ಗಮನಕ್ಕೆ ತರುವುದು ಹಾಗೂ ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಲು ತಿಳಿಸಿದೆ.
- ಸಾಮಾಜಿಕ ಜಾಲತಾಣಗಳಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪ್ರಚೋಧನಕಾರಿ ಪೋಸ್ಟರ್ ಗಳು, ಸುಳ್ಳುಸುದಿಗಳು, ಪ್ರಚೋದನಕಾರಿ ಸಂಧೇಶಗಳು ಹಾಗೂ ಯಾವುದೇ ಧರ್ಮದ ವಿರುದ್ದ / ವ್ಯಕ್ತಿಯ ವಿರುದ್ದ ಅವಹೇಳನಕಾರಿ ಪೋಸ್ಟರ್ / ಸಂದೇಶಗಳು ಕಂಡು ಬಂದಲ್ಲಿ ಮತ್ತೊಬ್ಬರಿಗೆ ರವಾನಿಸದೇ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಾಮಾಜಿಕ ಜಾಲತಾಣ ನಿಗಾ ಘಟಕದ ಸಂಖ್ಯೆ -9480803208 ಗೆ ಮಾಹಿತಿ ನೀಡುವುದು.
- ಅಂತಿಮ ದರ್ಶನದ ಸಮಯದಲ್ಲಿ ಹಾಗೂ ಎಲ್ಲಾ ಅಂತಿಮ ವಿಧಿವಿಧಾನಗಳ ಸಮಯದಲ್ಲಿ ಶಾಂತಿಯುತವಾಗಿರುವಂತೆ ಹಾಗೂ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.
- Shamanuru Shivashankarappa
- Shamanuru Shivashankarappa Death
- Shamanuru Shivashankarappa Death news
- Shamanuru Shivashankarappa Mla
- Shamanuru Shivashankarappa News
- Shamanuru Shivashankarappa News Updates
- ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ ಅಜರಾಮರ
- ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ಶಾಮನೂರು ಶಿವಶಂಕರಪ್ಪ ನೆನಪು ಮಾತ್ರ
- ಶಾಮನೂರು ಶಿವಶಂಕರಪ್ಪ ನ್ಯೂಸ್
- ಶಾಮನೂರು ಶಿವಶಂಕರಪ್ಪ ವಿಧಿವಶ





Leave a comment