ದಾವಣಗೆರೆ: ನಗರದ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭರ್ಜರಿ ಹಗಲು ಕನ್ನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತ ಅಂತಿಂಥ ಕಳ್ಳನಲ್ಲ. ಈತನ ಮೇಲಿತ್ತು 19 ಕೇಸ್ ಗಳು. ಖತರ್ನಾಕ್ ಖದೀಮ ಈತ. ದಾವಣಗೆರೆಯಲ್ಲಿ ಕಳ್ಳತನ ಮಾಡಿದ್ದ ಈತನಿಗೆ 72 ಗಂಟೆಯೊಳಗೆ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇವಲ 72 ಗಂಟೆಗಳ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತಂಡವು, ಅಂತರಾಷ್ಟ್ರೀಯ ಖ್ಯಾತಿಯ ವಾಚ್ ಸೇರಿದಂತೆ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.
ಘಟನೆಯ ವಿವರ:
ದಿನಾಂಕ 17-02-2026 ರಂದು ಮಧ್ಯಾಹ್ನ ಅಜ್ಗರ್ ಆಲಿ ಎಂಬುವವರು ಮಗನ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ, ಅವರ ಮನೆಯ ಬೀಗ ಮುರಿದು ಕಳ್ಳತನ ನಡೆದಿತ್ತು. ಈ ಸಂಬಂಧ ಕೆ.ಟಿ.ಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಸ್‌ಪಿ ಶ್ರೀ ಶೇಖರ್ ಹೆಚ್.ಟಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಆರೋಪಿಯ ಬಂಧನ:
ತನಿಖೆ ಕೈಗೊಂಡ ಪೊಲೀಸ್ ತಂಡವು ದಿನಾಂಕ 21-02-2026 ರಂದು ಕುಖ್ಯಾತ ಮನೆಗಳ್ಳ ಗೌತಮ್ ರಾಜ್ @ ಪೋತ ರಾಜ್ @ ಸದ್ದಾಂಹುಸೇನ್ (35) ಎಂಬಾತನನ್ನು ಬಂಧಿಸಿದೆ. ಬಂಧಿತನಿಂದ ₹29.29 ಲಕ್ಷ ಮೌಲ್ಯದ 261 ಗ್ರಾಂ ಚಿನ್ನ, ₹65 ಸಾವಿರ ಮೌಲ್ಯದ 439 ಗ್ರಾಂ ಬೆಳ್ಳಿ ಹಾಗೂ ₹23 ಸಾವಿರ ಮೌಲ್ಯದ ಅರ್ಮಾನಿ ಎಕ್ಸ್ ಚೇಂಜ್ ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಳ್ಳನ ಇತಿಹಾಸ:
ಬಂಧಿತ ಆರೋಪಿಯು ಸಾಮಾನ್ಯ ಕಳ್ಳನಲ್ಲ, ಈತನ ಮೇಲೆ ಈಗಾಗಲೇ ದಾವಣಗೆರೆ ಮತ್ತು ವಿವಿಧ ಜಿಲ್ಲೆಗಳಲ್ಲಿ ಒಟ್ಟು 19 ಹಗಲು ಕನ್ನ ಕಳುವು ಪ್ರಕರಣಗಳು ದಾಖಲಾಗಿವೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಹೆಚ್.ಎಸ್. ಮತ್ತು ಅವರ ತಂಡವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.





Leave a comment