Site icon Kannada News-suddikshana

ಕೆಎಸ್ಆರ್ ಟಿಸಿ ತಾತ್ಕಾಲಿಕ ಬಸ್ ನಿಲ್ದಾಣ ತೆರವು: ದಿನೇಶ್ ಕೆ. ಶೆಟ್ಟಿ

SUDDIKSHANA KANNADA NEWS/ DAVANAGERE/ DATE:12-02-2025

ದಾವಣಗೆರೆ: ನಗರದ ಹೈ ಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣವನ್ನು ಬಹಳ ದಿನಗಳಿಂದ ತೆರವುಗೊಳಿಸದೆ ಕ್ರೀಡಾಪಟುಗಳಿಗೆ ತೊಂದರೆಯಾಗಿತ್ತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣವನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿಯವರು ಜೆಸಿಬಿ ಚಲಾಯಿಸುವುದರ ಮುಖಾಂತರ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಅನೇಕ ತಿಂಗಳಗಳಿಂದ ಕೆಎಸ್ಆರ್ಟಿಸಿ ಜಿಲ್ಲಾಧಿಕಾರಿಗಳಿಗೆ ತೆರವುಗೊಳಿಸಲು ಸೂಚನೆ ನೀಡಿದರು. ತೆರವುಗೊಳಿಸಿದೆ ಕಾರಣಗಳನ್ನು ಹೇಳುತ್ತಾ ಸಮಯ ಮುಂದೂಡುತ್ತಿದ್ದರು. ಆದರೆ ಇಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರು ಸ್ವತಹ ತಾವೇ ಜೆಸಿಬಿ ಚಲಾಯಿಸುವ ಮುಖಾಂತರ ಬಸ್ ನಿಲ್ದಾಣವನ್ನು ತೆರವುಗೊಳಿಸುವುದಕ್ಕೆ ಅನುವು ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ತಿಮ್ಮೇಶ್, ಪರಶುರಾಮ್ ಗೋಪಾಲ್, ಚೇತನ್ ಅಜ್ಜಂಪೂರ್, ಬಕ್ಕೇಶ್ ದಿವಾಕರ್, ಶಿವರಾಜ್, ಸತೀಶ್ ಶೆಟ್ಟಿ, ಯುವರಾಜ್ ಮತ್ತಿತರರು ಹಾಜರಿದ್ದರು.

Exit mobile version