Site icon Kannada News-suddikshana

ಕೃಷಿ ಸಿಂಚಾಯಿ ಯೋಜನೆ: ತೋಟಗಾರಿಕೆ ಇಲಾಖೆಯಿಂದ ಅಡಿಕೆ ದೋಟಿ, ಅಡಿಕೆ ಸುಲಿಯುವ ಯಂತ್ರಗಳಿಗೆ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯು 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ರೈತರಿಂದ ಅರ್ಜಿಯನ್ನು ಆಹ್ವಾನಿಸಿದೆ. ತೋಟಗಾರಿಕೆಯ ಬೆಳೆಯನ್ನು ಬೆಳೆಯುತ್ತಿರುವಂತಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗದ ರೈತರಿಗೆ ಹನಿ ನೀರಾವರಿಯನ್ನು ಅಳವಡಿಸಿದ ಪ್ರತಿಯೊಬ್ಬ ಫಲಾನುಭವಿಗೆ ಮೊದಲನೇ 2 ಹೆ. ಪ್ರದೇಶದವರೆಗೆ ಶೇ. 90% & 3 ಹೆ. ಪ್ರದೇಶಕ್ಕೆ ಶೇ. 45% ರಷ್ಟು ಸಹಾಯಧನದ ಸೌಲಭ್ಯವು ಲಭ್ಯವಿರುತ್ತದೆ.

ಇಲಾಖೆಯಿಂದ ಅನುಮೋದಿತವಾದ ಕಂಪನಿಗಳ ಮೂಲಕವೇ ರೈತರು ಸೂಕ್ಷ್ಮವಾದ ನೀರಾವರಿಯ ಘಟಕವನ್ನು ಅಳವಡಿಸಿಕೊಲ್ಳುವುದು. ಆಸಕ್ತ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ತೋಟಗಾರಿಕೆ ಇಲಾಖೆ, ಶಿಕಾರಿಪುರ ಕಚೇರಿಯನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆಯುವುದು. 2024-25ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆಯ ಮಿಷನ್ ಯೋಜನೆಯ ಪರಿಶಿಷ್ಟ ಜಾತಿಯ ರೈತರಿಗೆ ಟ್ರಾಕ್ಟರ್ ಅನ್ನು ಖರೀದಿಸಲು ಸಹಾಯಧನವನ್ನು ನೀಡಲಾಗುತ್ತಿದ್ದು, ಆಸಕ್ತ ರೈತರು ಹತ್ತಿರದ ರೈತ ಸಂಪರ್ಕದ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹಾಗೂ 2024-25ನೇ ಸಾಲಿನ ಎಸ್.ಎಂ.ಎ.ಎಂ. ಯೋಜನೆಯ ಮೂಲಕ ಅಡಿಕೆ ಸಿಪ್ಪೆ ಸುಲಿಯುವಂತಹ ಯಂತ್ರ ಹಾಗೂ ಅಡಿಕೆ ದೋಟಿಗಳಿಗೆ ಸಹಾಯಧನವನ್ನು ನೀಡುಲಾಗುವುದು. ಆಸಕ್ತ ರೈತರು ಆಯಾ ಹೋಬಳಿಯ ರೈತರ ಸಂಪರ್ಕ ಸಹಾಯಕ ತೋಟಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈ ಎಲ್ಲಾ ಯೋಜನೆಗಳಿಗೆ ಸೆ. 23 ರೊಳಗಾಗಿ ಅರ್ಜಿಯನ್ನು ಸಲ್ಲಿಸುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿರುತ್ತಾರೆ.

Exit mobile version