Site icon Kannada News-suddikshana

2024- 25 ನೇ ಸಾಲಿನ ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಸೌಲಭ್ಯವನ್ನು ಪಡೆಯಲು ಅರ್ಜಿ ಆಹ್ವಾನ

(Krishi Bhagya) 2024- 25 ನೇ ಸಾಲಿನ ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಸೌಲಭ್ಯವನ್ನು ಪಡೆಯಲು ಅರ್ಜಿ ಆಹ್ವಾನಿಸಿದ್ದು, ಅರ್ಹ ರೈತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಕೃಷಿ ಭಾಗ್ಯ ಯೋಜನೆಯಲ್ಲಿ ಬದು, ಕೃಷಿ ಹೊಂಡ, ಕೃಷಿಹೊಂಡದ ಸುತ್ತಲು ತಂತಿ ಬೇಲಿ ನಿರ್ಮಾಣ, ಕೃಷಿಹೊಂಡಕ್ಕೆ ಪಾಲೀಥಿನ್ ಹೊದಿಕೆ, ಪಂಪ್‌ಸೆಟ್ ಅಲ್ಲದೆ ಲಘು ನೀರಾವರಿ ಘಟಕವನ್ನು ಅನುಷ್ಠಾನ ಮಾಡಲು ಸಹಾಯಧನ ನೀಡಲಾಗುತ್ತಿದ್ದು, ಅರ್ಹರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

(Krishi Bhagya) ಹಾಗಾದರೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?;
ಭರ್ತಿ ಮಾಡಿದ ಅರ್ಜಿ
ಪಾಸ್ ಪೋರ್ಟ್ ಸೈಜ್ ಪೋಟೊ
ಪಹಣಿ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ

ಎಲ್ಲಿ ಅರ್ಜಿ ಸಲ್ಲಿಸುವುದು?;
ಆಸಕ್ತ ಹಾಗೂ ಅರ್ಹ ರೈತರು ಭರ್ತಿ ಮಾಡಿದ ಅರ್ಜಿಯೊಂದಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Exit mobile version