ದಾವಣಗೆರೆ: ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಸ್ಕೂಲ್ ಶಾಲೆಯ ಶಿಕ್ಷಕರ ಹುದ್ದೆಗಳಿಗೆ ಉತ್ಸಾಹಿ, ಸೃಜನಶೀಲ ಮತ್ತು ಅನುಭವಿ ಅಭ್ಯರ್ಥಿಗಳಿಂದ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಂಗ್ಲಿಷ್ 02 ( ಪಿಜಿಟಿ, ಟಿಜಿಟಿ ), ಶಿಕ್ಷಕರ ಹುದ್ದೆ, ಎಂ.ಎ(ಇಂಗ್ಲಿಷ್) ಜೊತೆಗೆ ಬಿ.ಎಡ್, ವಿದ್ಯಾರ್ಹತೆ, ಗಣಿತ ಶಿಕ್ಷಕರ 01 ( ಪಿಜಿಟಿ, ಟಿಜಿಟಿ ) ಹುದ್ದೆ, ಎಂ.ಎಸ್ಸಿ (ಪಿಸಿಎಂ) ಮತ್ತು ಬಿ.ಎಡ್ ವಿದ್ಯಾರ್ಹತೆ, ವಿಜ್ಞಾನ ಶಿಕ್ಷಕರ 01 ( ಪಿಜಿಟಿ, ಟಿಜಿಟಿ ) ಹುದ್ದೆ, ಎಂ.ಎಸ್ಸಿ (ಸಿಬಿಝಡ್ ) ಮತ್ತು ಬಿ.ಎಡ್ ವಿದ್ಯಾರ್ಹತೆ, 2-5 ವರ್ಷಗಳ ಅನುಭವ, ಕಂಪ್ಯೂಟರ್ ಜ್ಞಾನ, ಮಕ್ಕಳ ಸ್ನೇಹಿ ವಿಧಾನವನ್ನು ಹೊಂದಿರಬೇಕು.
ಸಮಾಜ ವಿಜ್ಞಾನ ಶಿಕ್ಷಕರ 2 ಹುದ್ದೆ, ಎಂ.ಎ (ಅವರ) ಮತ್ತು ಬಿ.ಎಡ್ ವಿದ್ಯಾರ್ಹತೆ, ಕನ್ನಡ ಶಿಕ್ಞಕರ 01 (ಪಿಜಿಟಿ,ಟಿಜಿಟಿ ) ಎಂ.ಎ (ಕನ್ನಡ) ಮತ್ತು ಬಿ.ಎಡ್, ಹಿಂದಿ ಶಿಕ್ಷಕರ ಬಿ.ಎ, ಎಂ.ಎ (ಹಿಂದಿ ) ಮತ್ತು ಬಿ.ಎಡ್, ದೈಹಿಕ ಶಿಕ್ಷಣ ಶಿಕ್ಷಕರ 01 (ಪಿಆರ್‌ಟಿ) ಹುದ್ದೆ, ಬಿ.ಪಿ.ಎಡ್/ಎಂ.ಪಿ.ಎಡ್ ವಿದ್ಯಾರ್ಹತೆ 2-3 ವರ್ಷದ ಅನುಭವ ಹೊಂದಿರಬೇಕು.
ಕಂಪ್ಯೂಟರ್ ಸೈನ್ಸ್ ಶಿಕ್ಷಕರ 01 (ಪಿಆರ್‌ಟಿ) ಹುದ್ದೆಗೆ ಬಿಸಿಎ, ಬಿ.ಟೆಕ್,ಬಿ.ಎಸ್ಸಿ (ಕಂಪ್ಯೂಟರ್) ವಿದ್ಯಾರ್ಹತೆ 2-5 ವರ್ಷಗಳ ಅನುಭವ ಹಾಡ್ವೇರ್, ನೆಟ್‌ವರ್ಕಿಂಗ್ ಮತ್ತು ಕ್ಲೌಡ್ ನಿರ್ವಹಣೆ ಹೊಂದಿರಬೇಕು
ಅರ್ಹತೆ ಪಡೆದ ಅಭ್ಯರ್ಥಿಗಳು ಸ್ವ-ವಿವರಗಳನ್ನು ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಕಳುಹಿಸಬಹುದು ಅಥವಾ ppschooldvg@gmall.com ಗೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9743936234, 8277981961 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.





Leave a comment