Home ಉದ್ಯೋಗ ವಾರ್ತೆ ಕೆಎಂಎಫ್ ಶಿಮುಲ್ ನೇಮಕಾತಿ 2026: 194 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಕೆಎಂಎಫ್ ಶಿಮುಲ್ ನೇಮಕಾತಿ 2026: 194 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

Share
ಕೆಎಂಎಫ್
Share

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (KMF SHIMUL) ವತಿಯಿಂದ ಖಾಲಿ ಇರುವ ಒಟ್ಟು 194 ಸಹಾಯಕ ವ್ಯವಸ್ಥಾಪಕರು ಹಾಗೂ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಈಗ ಮರು ಅವಕಾಶ ನೀಡಲಾಗಿದೆ.

ಈ ಹಿಂದೆ 2025ರ ಡಿಸೆಂಬರ್‌ನಲ್ಲಿ ಕೆಎಂಎಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು, ಆದರೆ ಈಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಅವಧಿಯನ್ನು 21-ಫೆಬ್ರವರಿ-2026 ರವರೆಗೆ ವಿಸ್ತರಿಸಲಾಗಿದೆ.

ಹುದ್ದೆಗಳ ವಿವರ: ಒಕ್ಕೂಟದಲ್ಲಿ ಖಾಲಿ ಇರುವ ಸಹಾಯಕ ವ್ಯವಸ್ಥಾಪಕರು (17), ಎಂಐಎಸ್ ಆಫೀಸರ್, ತಾಂತ್ರಿಕ ಅಧಿಕಾರಿಗಳು, ಕೆಮಿಸ್ಟ್, ವಿಸ್ತರಣಾಧಿಕಾರಿ, ಆಡಳಿತ ಸಹಾಯಕರು, ಲೆಕ್ಕ ಸಹಾಯಕರು ಮತ್ತು ಕಿರಿಯ ತಾಂತ್ರಿಕರು (50) ಸೇರಿದಂತೆ ಒಟ್ಟು 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆಎಂಎಫ್ ಹುದ್ದೆಗಳು: 

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ಮಾಸಿಕ ವೇತನ ಶ್ರೇಣಿ (ರೂ.)
ಸಹಾಯಕ ವ್ಯವಸ್ಥಾಪಕ (ಎಎಚ್/ಎಐ)17
₹83,700 – 1,55,200
ಸಹಾಯಕ ವ್ಯವಸ್ಥಾಪಕ (ಆಡಳಿತ)1
₹83,700 – 1,55,200
ಸಹಾಯಕ ವ್ಯವಸ್ಥಾಪಕ (ಎಫ್&ಎಫ್)3
₹83,700 – 1,55,200
ಎಂಐಎಸ್ / ಸಿಸ್ಟಮ್ ಅಧಿಕಾರಿ1
₹69,250 – 1,34,200
ಮಾರ್ಕೆಟಿಂಗ್ ಅಧಿಕಾರಿ2
₹69,250 – 1,34,200
ತಾಂತ್ರಿಕ ಅಧಿಕಾರಿ (ಎಂಜಿನಿಯರ್)2
₹69,250 – 1,34,200
ತಾಂತ್ರಿಕ ಅಧಿಕಾರಿ (ಗುಣಮಟ್ಟ ನಿಯಂತ್ರಣ)2
₹69,250 – 1,34,200
ತಾಂತ್ರಿಕ ಅಧಿಕಾರಿ (ಡಿಟಿ)14
₹69,250 – 1,34,200
ರಸಾಯನಶಾಸ್ತ್ರಜ್ಞ ಗ್ರೇಡ್-I4
₹54,175 – 99,400
ವಿಸ್ತರಣಾ ಅಧಿಕಾರಿ ಗ್ರೇಡ್-III17
₹54,175 – 99,400
ಆಡಳಿತ ಸಹಾಯಕ ಗ್ರೇಡ್-II17
₹44,425 – 83,700
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-II12
₹44,425 – 83,700
ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-II10
₹44,425 – 83,700
ರಸಾಯನಶಾಸ್ತ್ರಜ್ಞ ಗ್ರೇಡ್-II28
₹44,425 – 83,700
ಜೂನಿಯರ್ ಸಿಸ್ಟಮ್ ಆಪರೇಟರ್13
₹44,425 – 83,700
ಸ್ಟೆನೋಗ್ರಾಫರ್ ಗ್ರೇಡ್-II1
₹44,425 – 83,700
ಜೂನಿಯರ್ ಟೆಕ್ನಿಷಿಯನ್50
₹34,100 – 67,600
ಒಟ್ಟು ಹುದ್ದೆಗಳು177

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 06-ಫೆಬ್ರವರಿ-2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-ಫೆಬ್ರವರಿ-2026 (ಸಂಜೆ 5:30 ರವರೆಗೆ)

ವಿದ್ಯಾರ್ಹತೆ ಮತ್ತು ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ (SSLC), ಐಟಿಐ, ಪದವಿ, ಬಿ.ಎಸ್ಸಿ, ಬಿ.ಇ/ಬಿ.ಟೆಕ್, ಬಿ.ವಿ.ಎಸ್ಸಿ, ಮತ್ತು ಎಂ.ಬಿ.ಎ ಓದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದಿನಾಂಕ 14-12-2025ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷ ಮಿರಬಾರದು (ಮೀಸಲಾತಿ ಅಭ್ಯರ್ಥಿಗಳಿಗೆ ವಿನಾಯಿತಿ ಇರುತ್ತದೆ).

ಗಮನಾರ್ಹ ಅಂಶಗಳು:

  • ಅತಿ ಹೆಚ್ಚು ಹುದ್ದೆಗಳು: ಜೂನಿಯರ್ ಟೆಕ್ನಿಷಿಯನ್ (50 ಹುದ್ದೆಗಳು).

  • ಗರಿಷ್ಠ ವೇತನ: ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ (ಗರಿಷ್ಠ 1.55 ಲಕ್ಷ ರೂ.).

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಶಿಮುಲ್ ಅಧಿಕೃತ ವೆಬ್‌ಸೈಟ್ www.shimul.coop ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದು.

Share

Leave a comment

Leave a Reply

Your email address will not be published. Required fields are marked *