ಬೆಂಗಳೂರು: ಬಿಗ್ ಬಾಸ್ ಫಿನಾಲೆ ಫಿವರ್ ಶುರುವಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋ ರಾಜ್ಯಾದ್ಯಂತ ಮನೆ ಮಾತಾಗಿದೆ. ಗಿಲ್ಲಿ, ಅಶ್ವಿನಿ ಗೌಡ, ಕಾವ್ಯ, ಧನುಷ್, ರಘು ರಕ್ಷಿತಾ ಫೈನಲ್ ಗೆ ಬಂದಿದ್ದಾರೆ.
ರಾಜ್ಯಾದ್ಯಂತ ಗಿಲ್ಲಿ ಮತ್ತು ಅಶ್ವಿನಿ ಗೌಡ ಪರ ವೋಟಿಂಗ್ ಸೇರಿದಂತೆ ಇನ್ನಿತರೆ ರೀತಿಯಲ್ಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಗಿಲ್ಲಿಗಂತೂ ಸಖತ್ ಕ್ರೇಜ್ ಇದ್ದು. ಸಂಜೆ ಬಿಗ್ ಬಾಸ್ ಯಾರೆಂಬುದು ಗೊತ್ತಾಗಲಿದೆ.
ಇದಕ್ಕೂ ಮುನ್ನ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು ಗಮನ ಸೆಳೆಯುತ್ತಿದೆ.
ಇಂದು ಸೂರ್ಯಾಸ್ತದ ವೇಳೆಗೆ, #BBK12 ಮುಕ್ತಾಯಗೊಳ್ಳಲಿದೆ. ಈ ಗಮನಾರ್ಹ ಸೀಸನ್, ಬೆಳವಣಿಗೆ ಮತ್ತು ಅದ್ಭುತದ ಅಸಾಧಾರಣ ಪ್ರಯಾಣ, ಪ್ರತಿ ಹಾದುಹೋಗುವ ಸೀಸನ್‌ನೊಂದಿಗೆ ಬಿಗ್‌ಬಾಸ್‌ನ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಅಚಲ ಬೆಂಬಲಕ್ಕಾಗಿ ಪ್ರತಿಯೊಬ್ಬ ಶ್ರದ್ಧಾಭರಿತ ವೀಕ್ಷಕರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಎಲ್ಲಾ ಸ್ಪರ್ಧಿಗಳಿಗೆ ಮತ್ತು ಸೀಸನ್‌ನ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಅದ್ಭುತ ಯಶಸ್ಸಿಗೆ ಇಡೀ ತಾಂತ್ರಿಕ ತಂಡಕ್ಕೆ ಅಭಿನಂದನೆಗಳು. ನೀವೆಲ್ಲರೂ ಇಲ್ಲದೆ ಬಿಬಿ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಹೊಸ #BBK13 ಪ್ರಾರಂಭವಾಗುವವರೆಗೆ ಬಿಗ್‌ಬಾಸ್ ವಿಶ್ರಾಂತಿ ಪಡೆಯಲು ನಾವು ಈಗ ಗೌರವಯುತವಾಗಿ ಬಾಗಿಲುಗಳನ್ನು ಮುಚ್ಚುತ್ತೇವೆ. ಲವ್ & ಹಗ್ಸ್ ಎಂದು ಬರೆದಿದ್ದಾರೆ.





Leave a comment