Site icon Kannada News-suddikshana

ಕುಣಿಬೆಳಕೆರೆ, ಮುದಹದಡಿ ಗ್ರಾ.ಪಂಗೆ ಕೆಹೆಚ್‍ಪಿಟಿ ರಾಜ್ಯ ತಂಡ ಭೇಟಿ ನೀಡಿದ್ಯಾಕೆ…?

SUDDIKSHANA KANNADA NEWS/ DAVANAGERE/ DATE:11-02-2024

ದಾವಣಗೆರೆ: ಹರಿಹರ ತಾಲ್ಲೂಕಿನ ಕುಣೆಬೆಳಕೆರೆ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ದಾವಣಗೆರೆ ತಾಲ್ಲೂಕಿನ ಮುದಹದಡಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ಕೆಹೆಚ್‍ಪಿಟಿ ರಾಜ್ಯ ತಂಡದ ವತಿಯಿಂದ ಗ್ರಾಮ ಆರೋಗ್ಯ ಕಾರ್ಯಕ್ರಮಗಳ ಚಟುವಟಿಕೆಗಳ ಕುರಿತಾಗಿ ಕಲಿಕಾ ಪ್ರವಾಸ ಹಾಗೂ ಅಧ್ಯತನ ನಡೆಸಲಾಯಿತು.

ಹರಿಹರ ತಾಲ್ಲೂಕಿನ ಕುಣೆಬೆಳಕೆರೆ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯತ್ ಕಾರ್ಯಪಡೆ ಸಭೆ ವೀಕ್ಷಣೆ, ಕ್ರಿಯಾ ಯೋಜನೆ ಮಾದರಿ, ಸಭೆಯಲ್ಲಿ ನಡೆಸುವ ಚರ್ಚೆಗಳ ಅಧ್ಯಯನ ತಂಡ ಮಾಹಿತಿ ಪಡೆಯಿತು.

ಗ್ರಾಮ ಆರೋಗ್ಯ ಕಾರ್ಯಕ್ರಮ ಕುರಿತಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನವ್ಯಾ, ಪಿಹೆಚ್‍ಸಿಒ ಸೌಮ್ಯಾ ರೆಡ್ಡಿ, ಅಕ್ಷತಾ ಅವರು ಆರೋಗ್ಯ ಜಾಗೃತಿ ಹಾಗೂ ಕಾರ್ಯಕ್ರಮ ರೂಪು ರೇಷೆ ಕುರಿತಾಗಿ
ಮಾಹಿತಿ ನೀಡಿದರು.

ಕುಣೆಬೆಳಕೆರೆ ಗ್ರಾಮ ಪಂಚಾಯತ್ ಕಾರ್ಯಪಡೆ ವತಿಯಿಂದ ಎರಡು ವರ್ಷಗಳಿಂದ ಗ್ರಾಮ ಆರೋಗ್ಯ ಕಾರ್ಯಕ್ರಮ ಆಯೋಜನೆ ಹಾಗೂ ಯಶಸ್ವಿ ಗೊಳಿಸಿಕೊಂಡು ಬಂದಿರುವ ಕುರಿತು ಪಂಚಾಯತ್ ಅಭಿವೃದ್ಧಿ
ಅಧಿಕಾರಿಗಳು ಮಾಹಿತಿ ನೀಡಿದರು. ಸಿಬ್ಬಂದಿ ಮಂಜಪ್ಪ ಅವರು ಗ್ರಾಮ ಪಂಚಾಯತ್ ಕಾರ್ಯಪಡೆ ಸಮಿತಿ ವತಿಯಿಂದ ಗ್ರಾಮ ಆರೋಗ್ಯ ಕಾರ್ಯಕ್ರಮ ಕುರಿತು ನಿರ್ವಹಿಸುತ್ತಿರುವ ದಾಖಲೀಕರಣ ಕುರಿತಾಗಿ ತಿಳಿಸಿದರು.

ಗ್ರಾಪಂ ಸದಸ್ಯರು ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡಿದಾಗ ಆಯಾ ವಾರ್ಡ್ ಸದಸ್ಯರು ತಮ್ಮದೇ ಆದ ಕರ್ತವ್ಯ ಹಾಗೂ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದಾರೆ. ಗ್ರಾಮ
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಿಯಾ ಯೋಜನೆ ರಚಿಸಲು ಸೂಚನೆ ನೀಡಿದರು. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಆರೋಗ್ಯ ಕಾರ್ಯಕರ್ತರು ಪರಸ್ಪರ ಮಾರ್ಚ್ 2024 ಕ್ರಿಯಾಯೋಜನೆ ರಚನೆ ಕುರಿತಾಗಿ ಚರ್ಚಿಸಿ ಅನುಮೋದನೆ ನೀಡಿದರು.

ದಾಖಲೀಕರಣ, ಗ್ರಾಮ ಪಂಚಾಯತ್ ನಿರ್ವಹಿಸಿರುವ ವರದಿಗಳು, ಹಾಗೂ ಫಲಾನುಭವಿಗಳು ಮತ್ತು ಕಾರ್ಯಪಡೆ ಸದಸ್ಯರ ಸ್ಪಂದನೆ ಈ ಎಲ್ಲ ಅಂಶಗಳನ್ನು ಅಧ್ಯಯನ ತಂಡದ ಸದಸ್ಯರು ಪರಿಶೀಲನೆ ಮಾಡಿದರು. ಮುದಹದಡಿ ಗ್ರಾಮ ಪಂಚಾಯಿತಿಯಲ್ಲಿ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮ ನಡೆಸಲಾಯಿತು.

ಮುದಹದಡಿ ಗ್ರಾಮ ಪಂಚಾಯತ್ ಕಾರ್ಯಪಡೆ ವತಿಯಿಂದ ಎರಡು ವರ್ಷಗಳಿಂದ ಗ್ರಾಮ ಆರೋಗ್ಯ ಕಾರ್ಯಕ್ರಮ ಆಯೋಜನೆ ಹಾಗೂ ಯಶಸ್ವಿಗೊಳಿಸಿಕೊಂಡು ಬಂದಿರುವ ಕುರಿತಾಗಿ ಗ್ರಾಮ ಪಂಚಾಯತ್
ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದರು. ಅಧ್ಯಯನ ತಂಡದೊಂದಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಆರೋಗ್ಯ ಸಿಬ್ಬಂದಿಗಳು, ಕಾರ್ಯದರ್ಶಿ ನೋಡಲ್ ಅಧಿಕಾರಿಗಳು ಅಗತ್ಯ ಮಾಹಿತಿಗಳ ಕುರಿತು ಚರ್ಚಿಸಿದರು. ಅನಿಸಿಕೆ ಅಭಿಪ್ರಾಯಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆ ಶಿಬಿರವನ್ನು ಅತಿಥಿ ಗಣ್ಯರು ವೀಕ್ಷಿಸಿದರು. ಹಾಗೂ ಕಾರ್ಯಕ್ರಮ ಆಯೋಜನೆಯ ಅಧ್ಯಯನ ತಂಡ ಪರಿಶೀಲನೆ ಮಾಡಿದರು. ಸಭೆಯಲ್ಲಿ ಕುಳಿತುಕೊಳ್ಳಲು ಶಾಮಿಯಾನ
ನೆರಳಿನ ವ್ಯವಸ್ಥೆ, ಚೇರ್, ಟೇಬಲ್ ವ್ಯವಸ್ಥೆ, ಕುಡಿಯಲು ಅಗತ್ಯ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗ್ರಾಮ ಪಂಚಾಯತ್ ಕಿಟ್‍ಲ್ಲಿರುವ ಉಪಕರಣಗಳ ಸ್ಥಿತಿ-ಗತಿ ಹಾಗೂ ಉಪಭೋಗ್ಯ ವಸ್ತುಗಳ ಲಭ್ಯತೆ
ಹಾಗೂ ಫಲಾನುಭವಿಗಳಿಗೆ ತಪಾಸಣೆ ಮಾಡುವ ಎಲ್ಲ ಹಂತಗಳು, ದಾಖಲೀಕರಣ, ಗ್ರಾಮ ಪಂಚಾಯತ್ ನಿರ್ವಹಿಸಿರುವ ವರದಿ ಗಳು ಹಾಗೂ ಫಲಾನುಭವಿಗಳು ಮತ್ತು ಕಾರ್ಯಪಡೆ ಸದಸ್ಯರ ಸ್ಪಂದನೆ ಸೇರಿದಂತೆ ಈ ಎಲ್ಲ ಅಂಶಗಳನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ತಂಡದ ವತಿಯಿಂದ ಜನ್ಸ್ ಆಕ್ಸಫರ್ಡ್ ಯೂನಿವರ್ಸಿಟಿ ಪ್ರೊಫೆಸರ್ ಸ್ಯುಯ, ಜಾನ್ಸ್ ಹ್ಯಾಪ್ಕೀನ್ಸ್ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಹೆಲ್ತ್ ಹಿರಿಯ ಸಂಶೋಧಕಿ ಶಾಲಿನಿ ಸಿಂಗ್, ಕೆಹೆಚ್‍ಪಿಟಿಯ ಡಾ.ಎನ್.ಸ್ವರೂಪ್, ಎಂ.ಸುರೇಶ್, ಗ್ರಾಮ ಆರೋಗ್ಯ ಕಾರ್ಯಕ್ರಮ ದಾವಣಗೆರೆ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಎನ್.ಎಸ್.ದಿಲೀಪ್ ಕುಮಾರ್, ತಾಲ್ಲೂಕು ಸಂಯೋಜಕಿ ವನಿತಾ ಹೊಳಲು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.

Exit mobile version