Site icon Kannada News-suddikshana

ಪೋಷಕರೇ ಎಚ್ಚರ: ಮಕ್ಕಳಿಗೆ ಹಣ್ಣು ಕೊಡುವಾಗ ಜಾಗೃತೆ , ರಂಬುಟಾನ್ ಹಣ್ಣು ಗಂಟಲಿಗೆ ಸಿಲುಕಿ ಬಾಲಕಿ ಮೃತ್ಯು..!!

ಪೆರುಂಬವೂರ್ (Kerala) : ರಂಬುಟಾನ್ ಹಣ್ಣು ತಿನ್ನುವಾಗ ಗಂಟಲಿನಲ್ಲಿ ಹಣ್ಣು ಸಿಲುಕಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆರ ಕೇರಳದ ಪೆರುಂಬವೂರಿನಲ್ಲಿ ಸಂಭವಿಸಿದೆ.

ಇಲ್ಲಿನ ಕಂಡಂತರ ಚಿರಾಯತುವೀಟ್ ನಲ್ಲಿ ಮನ್ಸೂರ್ ಅವರ ಪುತ್ರಿ ನೂರಾ ಫಾತಿಮಾ (6) ಮೃತ ಬಾಲಕಿಯಾಗಿದ್ದಾಳೆ. ಭಾನುವಾರ ಸಂಜೆ ಮನೆಯಲ್ಲಿ ಇತರ ಮಕ್ಕಳೊಂದಿಗೆ ರಂಬುಟಾನ್ ತಿನ್ನುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಂಟಲಲ್ಲಿ ರಂಬುಟನ್ ಹಣ್ಣಿನ ಬೀಜ ಸಿಲುಕಿದ್ದ ಕಾರಣ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಳು. ಕಂಡಂತರ ಹಿದಾಯತುಲ್ ಇಸ್ಲಾಂ ಶಾಲೆ ಯು.ಕೆ.ಜಿ. ವಿದ್ಯಾರ್ಥಿನಿಯಾಗಿರುವ ನೂರ್ ಫಾತಿಮಾ ತಾಯಿ ಮತ್ತು ಸಹೋದರಿಯರಾದ ಬೀಮಾ ಫಾತಿಮಾ ಮತ್ತು ಐಸಾ ಫಾತಿಮಾರನ್ನು ಅಗಲಿದ್ದಾಳೆ.

Exit mobile version