Site icon Kannada News-suddikshana

ದರ್ಶನ್ ತೂಗುದೀಪ್ ಜಾಮೀನು ರದ್ದತಿಯಿಂದ ನ್ಯಾಯಾಂಗದ ಮೇಲೆ ನಂಬಿಕೆ ಬಂದಿದೆ ಎಂದ್ರು ಕಾಶಿನಾಥಯ್ಯ: ತಪ್ಪು ಮಾಡಿದವ್ರಿಗೆ ಶಿಕ್ಷೆಯಾಗಲಿ ಎಂದ್ರು ಸಹನಾ!

ದರ್ಶನ್ ತೂಗುದೀಪ್

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸುತ್ತಿದ್ದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದ್ದಾರೆ.

READ ALSO THIS STORY: “ಕಾನೂನಿಗೆ ಮೀರಿದವರು ಯಾರೂ ಇಲ್ಲ”: ನಟ ದರ್ಶನ್ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಏನೆಲ್ಲಾ ಹೇಳಿದೆ? ಕಂಪ್ಲೀಟ್ ಡೀಟೈಲ್ಸ್

ಸುಪ್ರೀಂಕೋರ್ಟ್ ನಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಪಡಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಅವರು, ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಪಡಿಸಿದ್ದರಿಂದ ನ್ಯಾಯಾಂಗದ ಮೇಲಿನ ನಂಬಿಕೆ ಮತ್ತಷ್ಟು
ಹೆಚ್ಚಿಸಿದೆ ಎಂದು ಕಾಶಿನಾಥಯ್ಯ ಹೇಳಿದ್ದಾರೆ.

ಹೈಕೋರ್ಟ್ ನಲ್ಲಿ ದರ್ಶನ್ ತೂಗುದೀಪ ಸೇರಿ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿದಾಗ ಬೇಸರ ಆಗಿತ್ತು. ನ್ಯಾಯದ ಮೇಲೆ ಸ್ವಲ್ಪ ಪ್ರಮಾಣದಲ್ಲಿ ಅಸಮಾಧಾನ ಇತ್ತು. ಆದರೆ ಇಂದು ಹೈಕೋರ್ಟ್ ನೀಡಿದ್ದ ಆದೇಶ ರದ್ದುಪಡಿಸಿದ್ದು
ನಮಗೆ ಖುಷಿ ಕೊಟ್ಟಿದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ತಂದಿದೆ ಎಂದು ಕಾಶಿನಾಥಯ್ಯ ಹೇಳಿದ್ದಾರೆ.

ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂಬುದಷ್ಟೇ ನಮ್ಮ ವಾದ. ನಾವು ಯಾರ ವಿರುದ್ಧವೂ ಇಲ್ಲ. ನನ್ನ ಮಗನನ್ನು ಕ್ರೂರವಾಗಿ ಕೊಂದು ಹಾಕಲಾಗಿತ್ತು. ನಾವೆಲ್ಲರೂ ಇಂದಿಗೂ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೆೇವೆ. ಆತ ಇಲ್ಲವಾದ
ಮೇಲೆ ಬದುಕು ಕಣ್ಣೀರಿನಲ್ಲಿ ಹೋಗುತ್ತಿದೆ. ನನ್ನ ಮಗನ ಸಾವಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ ಎಂದು ಕಾಶಿನಾಥಯ್ಯ ಭಾವುಕರಾಗಿ ಹೇಳಿದ್ದಾರೆ.

Exit mobile version