ಕಾಸರಗೋಡು: ಕಾಸರಗೋಡಿನ ಲವ್ ಜಿಹಾದ್ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಯುವತಿ ಕೇರಳದವಳು. ಯುವಕ ಮಂಗಳೂರಿನ ಸುರತ್ಕಲ್ ನವನು. ಇಬ್ಬರ ನಡುವೆ ಪ್ರೀತಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಯುವತಿಯ ಪೋಷಕರಂತೂ ಅಂಗಲಾಚಿ ಬೇಡಿದರೂ ಕ್ಯಾರೇ ಎನ್ನುತ್ತಿಲ್ಲ ಹಿಂದೂ ಯುವತಿ. ಪೋಷಕರು ಇಷ್ಟು ವರ್ಷ ಸಾಕಿ ಸಲುಹಿ ಮುಸ್ಲಿಂನ ಜೊತೆ ಓಡಿ ಹೋಗಿರುವುದರಿಂದ ಪೊಲೀಸ್ ಮೆಟ್ಟಿಲೇರುವ ಸ್ಥಿತಿ ತಲುಪಿದ್ದಾರೆ.
ಕಾಸರಗೋಡಿನ ವೈಶಾಲಿಗೆ ಈಗ 23 ವರ್ಷ. ಹೆತ್ತವರು ಮುದ್ದಾಗಿ ಸಾಕಿ ಬೆಳೆಸಿದ್ದರು. ತಮಗೆ ಕೊರತೆಯಾದ್ರೂ ಮಗಳಿಗೆ ಯಾವುದೇ ಸಮಸ್ಯೆಯಾಗದಂತೆ ಸಾಕಿ ಓದಿಸುತ್ತಿದ್ರು.
ಪೋಷಕರ ಗಂಭೀರ ಆರೋಪಗಳು
ಯುವತಿಯ ತಂದೆ ವಿಶ್ವನಾಥ್ ಅವರು ವಿದೇಶದಿಂದ ಧಾವಿಸಿ ಬಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ಪ್ರಮುಖ ವಾದಗಳೆಂದರೆ:
ಬ್ರೈನ್ ವಾಶ್ ಮತ್ತು ಬೆದರಿಕೆ: ಮಗಳು ಸ್ವಇಚ್ಛೆಯಿಂದ ಹೋಗಿಲ್ಲ, ಆಕೆಯನ್ನು ಬ್ರೈನ್ ವಾಶ್ ಮಾಡಲಾಗಿದೆ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಮದುವೆಯಾಗುವಂತೆ ಒತ್ತಾಯಿಸಲಾಗಿದೆ.
ಸಂಪರ್ಕ ಕಡಿತ: ಮದುವೆಯ ವಿಚಾರ ತಿಳಿಯುತ್ತಿದ್ದಂತೆಯೇ ಮಗಳ ಫೋನ್ ಸ್ವಿಚ್ ಆಫ್ ಆಗಿದ್ದು, ಪೋಷಕರಿಗೆ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಪೊಲೀಸರ ಅಸಹಕಾರ: ಕೇರಳ ಪೊಲೀಸರು ಹುಡುಗನ ಕಡೆಯವರನ್ನು ಬೆಂಬಲಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಕರ್ನಾಟಕ ಪೊಲೀಸರಿಂದ ನ್ಯಾಯ ನಿರೀಕ್ಷಿಸುತ್ತಿದ್ದಾರೆ.
ಆದರೆ ಈ ವೈಶಾಲಿ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕಾದ ಕಾಲೇಜ್ ಒಂದರಲ್ಲಿ ಕ್ರಿಮಿನಾಲಜಿ ಓದಿಸ್ತಿದ್ರು. ಈ ವೇಳೆ ಮುಸ್ಲಿಂ ಸಮುದಾಯದ ವಯನಾಡು ಮೂಲದವನಾದ ಮೊಹಮ್ಮದ್ ವಿದ್ಲಾಜ್ ಮೇಲೆ ಪ್ರೀತಿ ಹುಟ್ಟಿದೆ. ಈತ ಸುರತ್ಕಲ್ನ ಜ್ಯುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಜ.31ರಂದು ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಆಗಿದ್ದಾರೆ.
ವಿದೇಶದಿಂದ ಓಡಿ ಬಂದ ತಂದೆ:
ವಿಚಾರ ಗೊತ್ತಾಗುತ್ತಿದ್ದಂತೆ ವಿದೇಶದಿಂದ ತಂದೆ ಓಡಿ ಬಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವೈಶಾಲಿ ಮನೆಯವರಿಗೆ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿರುವುದು ಗೊತ್ತಾಗಿದೆ. ವಿಷಯ ತಿಳಿದು ಮಗಳಿಗೆ ಫೋನ್ ಮಾಡಿದ್ರೆ ಸ್ವಿಚ್ಡ್ ಆಫ್ ಬಂದಿದೆ. ವಿಷಯ ತಿಳಿದ ತಂದೆ ವಿಶ್ವನಾಥ್, ವಿದೇಶದಿಂದ ಓಡೋಡಿ ಬಂದಿದ್ದಾರೆ. ಬಂದವರೇ ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.
ಮಗಳು ಲವ್ ಮಾಡಿ ಮದುವೆಯಾಗಿಲ್ಲ. ಆಕೆಯ ಬ್ರೈನ್ ವಾಶ್ ಮಾಡಲಾಗಿದೆ. ಆಕೆಗೆ ಬ್ಲಾಕ್ ಮೇಲ್ ಮಾಡಿ, ಬೆದರಿಸಿ ಕರೆದುಕೊಂಡು ಹೋಗಾಲಾಗಿದೆ. ದಯವಿಟ್ಟು ನಮ್ಮ ಮಗಳನ್ನ ನಮಗೆ ಕೊಡಿಸಿ ಅಂತ ಅಂಗಲಾಚಿದ್ದಾರೆ.
ಕೇರಳ ಪೊಲೀಸರ ಮೇಲೆ ಆರೋಪ:
ಕೇರಳ ಪೊಲೀಸರು ಹುಡುಗನ ಕಡೆ ಶ್ಯಾಮೀಲಾಗಿದ್ದಾರೆ ಅಂತ ಆರೋಪಿಸ್ತಿದ್ದಾರೆ. ನೀವು ನಮಗೆ ನ್ಯಾಯ ದೊರಕಿಸಿಕೊಡಿ ಅಂತಾ ಪೋಷಕರು ಸುರತ್ಕಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರೀತಿಸಿದವನ ಜೊತೆ ಹೋಗುತ್ತಾಳಾ ಅಥವಾ ಪೋಷಕರ ಪ್ರೀತಿಗೆ ವೈಶಾಲಿ ಕರಗುತ್ತಾಳಾ ಎನ್ನುವುದಕ್ಕಿಂತ ಪೋಷಕರು ಕಾಡಿ ಬೇಡಿದರೂ ಮನ ಕರಗದ ಯುವತಿ ಪ್ರೀತಿಗೆ ಅಂಟಿಕೊಂಡಿದ್ದಾಳೆ. ಈ ಪ್ರಕರಣ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕು.
- Brainwashing allegations
- Inter-faith marriage controversy
- Kerala girl missing
- Love Jihad Allegation
- Mohammed Vidlaj
- Surathkal Police Station
- Vaisali Kasaragod
- Vishwanath complaint.
- ಅಂತರ್ಜಾತಿ ವಿವಾಹ ವಿವಾದ
- ಕೇರಳ ಯುವತಿ ನಾಪತ್ತೆ
- ಬ್ರೈನ್ ವಾಶ್ ಆರೋಪ
- ಮೊಹಮ್ಮದ್ ವಿದ್ಲಾಜ್
- ಲವ್ ಜಿಹಾದ್ ಪ್ರಕರಣ
- ವಿಶ್ವನಾಥ್ ದೂರು.
- ವೈಶಾಲಿ ಕಾಸರಗೋಡು
- ಸುರತ್ಕಲ್ ಪೊಲೀಸ್ ಠಾಣೆ





Leave a comment