SUDDIKSHANA KANNADA NEWS/DAVANAGERE/DATE:08_12_2025
ದಾವಣಗೆರೆ: ಇಲ್ಲಿನ ಹಳೆಪೇಟೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕಡೆ ಕಾರ್ತಿಕೋತ್ಸವ ಡಿ. 9ರ ರಾತ್ರಿ 9 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ದೀಪೋತ್ಸವಕ್ಕೂ ಮುನ್ನ ಸಂಜೆ 7 ಗಂಟೆಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಉತ್ಸವವು ದೇವಸ್ಥಾನದಿಂದ ಹೊರಟು ಎಸ್ಕೆಪಿ ರಸ್ತೆ, ಪಾತಾಳ ಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕಾಯಿಪೇಟೆ, ಬೆಳ್ಳುಳ್ಳಿ ಗಲ್ಲಿ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಮಹಾರಾಜಪೇಟೆ, ಕಾಳಿಕಾದೇವಿ ರಸ್ತೆ, ಆನೆಕೊಂಡ ರಸ್ತೆ, ಹಳೆಪೇಟೆ ಮುಖಾಂತರ ದೇವಸ್ಥಾನಕ್ಕೆ ತಲುಪಲಿದೆ.
ನಂತರ ದೇವಸ್ಥಾನದ ಮುಂಭಾಗದ ಆಭರಣದಲ್ಲಿ ಕಾರ್ತಿಕ ದೀಪೋತ್ಸವ ಇರಲಿದೆ ಎಂದು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ತಿಳಿಸಿದೆ.





Leave a comment