Home ದಾವಣಗೆರೆ ಕರ್ನಾಟಕ ಬಜೆಟ್ 2026: ಮೇಕೆದಾಟು, ಎತ್ತಿನಹೊಳೆ ಹಾಗೂ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಕರ್ನಾಟಕ ಬಜೆಟ್ 2026: ಮೇಕೆದಾಟು, ಎತ್ತಿನಹೊಳೆ ಹಾಗೂ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ

Share
ಬಜೆಟ್
Share

ಬೆಂಗಳೂರು: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಮೇಕೆದಾಟು, ಎತ್ತಿನಹೊಳೆ ಮತ್ತು ಕೃಷ್ಣಾ ಮೇಲ್ದಂಡೆಯಂತಹ ದಶಕಗಳ ಕನಸಿನ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಬದ್ಧತೆ ಪ್ರದರ್ಶಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾನೂನು ಅಡೆತಡೆಗಳು ನಿವಾರಣೆಯಾಗುತ್ತಿದ್ದು, ಶೀಘ್ರವೇ ಕೇಂದ್ರಕ್ಕೆ ಪರಿಷ್ಕೃತ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಉತ್ತರ ಕರ್ನಾಟಕದ ಜೀವನಾಡಿಯಾದ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕಾಗಿ ರೈತರಿಗೆ ಆಕರ್ಷಕ ಪರಿಹಾರ ಧನ ಘೋಷಿಸುವ ಮೂಲಕ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಮುಖ್ಯಾಂಶಗಳು:

ಮೇಕೆದಾಟು ಯೋಜನೆ:

ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಜಯ ಸಿಕ್ಕ ಹಿನ್ನೆಲೆ, ಶೀಘ್ರದಲ್ಲೇ ಕೇಂದ್ರಕ್ಕೆ ಪರಿಷ್ಕೃತ DPR ಸಲ್ಲಿಕೆ.

ಎತ್ತಿನಹೊಳೆ ಯೋಜನೆ:

2ನೇ ಹಂತದ ಕಾಮಗಾರಿಗಳಿಗೆ ಚಾಲನೆ; ವಡೇರಹಳ್ಳಿ ಬಳಿ 1.2 TMC ಸಮತೋಲನಾ ಜಲಾಶಯ ನಿರ್ಮಾಣ.

ಕೃಷ್ಣಾ ಮೇಲ್ದಂಡೆ (UKP-III):

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕಾಗಿ ಖುಷ್ಕಿ ಜಮೀನಿಗೆ ₹30 ಲಕ್ಷ ಹಾಗೂ ತರಿ ಜಮೀನಿಗೆ ₹40 ಲಕ್ಷ ಪರಿಹಾರ ಘೋಷಣೆ.

ತುಂಗಭದ್ರಾ ಹೂಳು ಸಮಸ್ಯೆ:

ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಅಂತರರಾಜ್ಯ ಮಟ್ಟದ ಸಮಾಲೋಚನೆ.

ಕೆರೆ ತುಂಬಿಸುವ ಯೋಜನೆಗಳು: ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಿಸಲು ಸಂಸ್ಕರಿಸಿದ ನೀರು ಬಳಕೆ.

ಜಲಾಶಯಗಳ ನಿರ್ವಹಣೆ ಮತ್ತು ಆಧುನೀಕರಣ

  • ತುಂಗಭದ್ರಾ ಅಣೆಕಟ್ಟು: ಹಳೆಯ 33 ಗೇಟುಗಳ ಬದಲಾವಣೆ. ಹೂಳಿನ ಸಮಸ್ಯೆಗೆ ಪರ್ಯಾಯವಾಗಿ ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಅಕ್ಕಪಕ್ಕದ ರಾಜ್ಯಗಳೊಂದಿಗೆ ಚರ್ಚೆ.

  • ಹೊಸ ತಂತ್ರಜ್ಞಾನ: ಹತ್ತಿಕುಣಿ ಮತ್ತು ತುಂಗಭದ್ರಾ ಎಡದಂಡೆ ನಾಲಾ ಭಾಗದಲ್ಲಿ ನೀರಿನ ದಕ್ಷತೆ ಹೆಚ್ಚಿಸಲು Pressurised Piped Network (ಒತ್ತಡದ ಪೈಪ್ ಜಾಲ) ಅಳವಡಿಕೆ.

  • ಹೊಸ ಜಲಾಶಯಗಳು: ಚಾಮರಾಜನಗರದ ಹನೂರಿನಲ್ಲಿ ಉಡುತೊರೆಹಳ್ಳ ಯೋಜನೆ (₹490 ಕೋಟಿ) ಮತ್ತು ವಿಜಯಪುರದ ಬಾಬಾ ನಗರದಲ್ಲಿ ಸಂಗ್ರಹಣಾ ಜಲಾಶಯ.

ಸಣ್ಣ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಗಳು

ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಕುಡಿಯುವ ನೀರಿಗಾಗಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ:

  • ಹೆಚ್.ಎನ್ ವ್ಯಾಲಿ (HN Valley): ಶಿಡ್ಲಘಟ್ಟ ಮತ್ತು ಚಿಂತಾಮಣಿಯ 164 ಕೆರೆಗಳಿಗೆ ನೀರು (₹237 ಕೋಟಿ).

  • ವೃಷಭಾವತಿ ವ್ಯಾಲಿ: ನೆಲಮಂಗಲ ಮತ್ತು ದೊಡ್ಡಬಳ್ಳಾಪುರದ 119 ಕೆರೆಗಳಿಗೆ ಸಂಸ್ಕರಿಸಿದ ನೀರು (₹650 ಕೋಟಿ).

  • ಒಟ್ಟಾರೆ ಗುರಿ: ರಾಜ್ಯಾದ್ಯಂತ ₹1,793 ಕೋಟಿ ವೆಚ್ಚದಲ್ಲಿ 112 ಹೊಸ ಕಾಮಗಾರಿಗಳ ಅನುಷ್ಠಾನ.

Share

Leave a comment

Leave a Reply

Your email address will not be published. Required fields are marked *

Related Articles