Home ದಾವಣಗೆರೆ ಮಹಿಳೆಯರಿಗೆ ಬಂಪರ್: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ದಾವಣಗೆರೆನವದೆಹಲಿಬೆಂಗಳೂರುವಾಣಿಜ್ಯ

ಮಹಿಳೆಯರಿಗೆ ಬಂಪರ್: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Share
Share

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮವು 2025-26 ನೇ ಸಾಲಿನ ಉದ್ಯೋಗಿನಿ, ಚೇತನಾ, ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಅರ್ಹ ಮಹಿಳೆಯರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಡಿಸೆಂಬರ್ 15 ರೊಳಗಾಗಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗಿನಿ ಯೋಜನೆ:

55 ವರ್ಷದ ಒಳಗಿನ ಮತ್ತು ವಾರ್ಷಿಕ ಆದಾಯ ರೂ 1,50,000 ದ ಒಳಗಿರುವ ನಿರುದ್ಯೋಗಿ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆ ಕೈಕೊಳ್ಳಲು ಬ್ಯಾಂಕ್ ಗಳಿಂದ ಗರಿಷ್ಟ ರೂ 3,00,000 ದವರೆಗೆ ಸಾಲ ಮತ್ತು ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಬ್ಯಾಂಕ್ ಸಾಲದ ಶೇ.50 (ಗರಿಷ್ಠ ರೂ 1,50,000) ಸಹಾಯಧನ ಮತ್ತು ಎಸ್ ಸಿ ಎಸ್ ಟಿ ಹೊರತುಪಡಿಸಿ ಉಳಿದ ಎಲ್ಲಾ ಸಮುದಾಯದವರಿಗೂ ಶೇ 30 (ಗರಿಷ್ಟ 90,000) ಸಹಾಯಧನ ನೀಡಲಾಗುವುದು.

ಚೇತನಾ ಯೋಜನೆ:

ದಮನಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ರೂ 30,000 ಪೋತ್ಸಾಹಧನ ನೀಡಲಾಗುವುದು.

ಧನಶ್ರೀ ಯೋಜನೆ:

ಹೆಚ್.ಐ.ವಿ ಸೋಂಕಿತ ಮತ್ತು ಭಾದಿತ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳಲು ರೂ 30,000 ಪೋತ್ಸಾಹಧನ ನೀಡಲಾಗುವುದು. ಅರ್ಜಿಗಳನ್ನು ಆಫ್‌ಲೈನ್ ನಲ್ಲೂ ಸಹ ಸಲ್ಲಿಸಬಹುದಾಗಿದೆ.

ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ:

ತೃತೀಯ ಲಿಂಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ರೂ 30,000 ಪೋತ್ಸಾಹಧನ ನೀಡಲಾಗುವುದು. ಅರ್ಜಿಗಳನ್ನು ಆಫ್‌ಲೈನ್ ನಲ್ಲೂ ಸಹ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮಹಿಳಾ ಅಭಿವೃದ್ಧಿ ನಿಗಮ, ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *