ದಾವಣಗೆರೆ: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಹೆಚ್. ಕೃಷ್ಣ ಅವರ ನೇತೃತ್ವದ ತಂಡವು ದಾವಣಗೆರೆಯಲ್ಲಿನ ವಿವಿಧ ನ್ಯಾಯಬೆಲೆ ಅಂಗಡಿ, ಅಂಗನವಾಡಿ, ಹಾಸ್ಟೆಲ್ ಮತ್ತು ಶಾಲೆಯಲ್ಲಿನ ಬಿಸಿಯೂಟ ನೀಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ದಾಸ್ತಾನು ಪರಿಶೀಲನೆ:
ನ್ಯಾಯಬೆಲೆ ಅಂಗಡಿಯಲ್ಲಿ ದಾಸ್ತಾನು ವ್ಯತ್ಯಾಸದ ಪರಿಶೀಲನೆ, ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದಲ್ಲಿ ಗುಣಮಟ್ಟ, ಪರಿಮಾಣದ ಕೊರತೆ, ಶಾಲೆಯಲ್ಲಿ ನೀಡಲಾಗುತ್ತಿರುವ ಆಹಾರ ಧಾನ್ಯಗಳ ದಾಸ್ತಾನಿನಲ್ಲಿ ವ್ಯತ್ಯಾಸವನ್ನು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಪತ್ತೆಹಚ್ಚಿ ಪರಿಶೀಲನೆ ನಡೆಸಿದರು.
ಎಲ್ಲೆಲ್ಲಿ ಪರಿಶೀಲನೆ:
ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಪ್ರತ್ಯೇಕವಾಗಿ ದೇವರಾಜ್ ಅರಸ್ ನಗರದಲ್ಲಿನ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ, ಶೇಖರಪ್ಪ ನಗರದ ನ್ಯಾಯಬೆಲೆ ಅಂಗಡಿ, ಜೆ.ಎಚ್.ಪಟೇಲ್ ಬಡಾವಣೆಯಲ್ಲಿನ ಎಸ್.ಟಿ.ಹಾಸ್ಟೆಲ್, ಎಸ್.ಪಿ.ಎಸ್.ನಗರದಲ್ಲಿನ ಸರ್ಕಾರಿ ಪ್ರೌಢಶಾಲೆ, ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಪರಿಶೀಲನೆ ನಡೆಸಿದರು.
ಆಯೋಗದ ಸದಸ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- 2026
- Anganwadi
- DAVANAGERE
- Dr. H. Krishna
- Fair Price Shop
- Food Stock Verification
- Government School
- Hostel
- Karnataka State Food Commission
- Karnataka Varthe
- Mid-day Meal
- Quality Inspection
- Ration Shop
- Student Hostel
- ಅಂಗನವಾಡಿ
- ಆಹಾರ ಸಾಮಗ್ರಿ ದಾಸ್ತಾನು
- ಕರ್ನಾಟಕ ರಾಜ್ಯ ಆಹಾರ ಆಯೋಗ
- ಕರ್ನಾಟಕ ವಾರ್ತೆ
- ಗುಣಮಟ್ಟ ಪರಿಶೀಲನೆ
- ಡಾ. ಹೆಚ್. ಕೃಷ್ಣ
- ದಾವಣಗೆರೆ
- ನ್ಯಾಯಬೆಲೆ ಅಂಗಡಿ
- ಪಡಿತರ ಚೀಟಿ
- ಬಿಸಿಯೂಟ
- ವಿದ್ಯಾರ್ಥಿ ನಿಲಯ
- ಸರ್ಕಾರಿ ಶಾಲೆ
- ಹಾಸ್ಟೆಲ್





Leave a comment