ಶಿವಮೊಗ್ಗ: ದೇಶಾದ್ಯಂತ ಸಂಚಲನ ಮೂಡಿಸಿರುವ ಸುಮಾರು 82 ಕೋಟಿ ರೂಪಾಯಿಗಳ ಬೃಹತ್ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಿವಮೊಗ್ಗದ ಜಗದೀಶ್ ಸಿ (43), ಅನಂತ ಟಿ (34) ಮತ್ತು ಚಿಕ್ಕಮಗಳೂರಿನ ಅರ್ಷದ್ (39) ಎಂದು ಗುರುತಿಸಲಾಗಿದೆ. ಈ ಜಾಲವು ದೇಶದ ವಿವಿಧೆಡೆ ನಡೆದ ಸುಮಾರು 352 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಂಚನೆಯ ಜಾಲ:
ಮುಖ್ಯ ಆರೋಪಿ ಜಗದೀಶ್ ಎಂಬಾತ ವಿಲ್ಸನ್ ವಿ ಎಂಬುವವರಿಗೆ ಕಮಿಷನ್ ಆಮಿಷವೊಡ್ಡಿ ಬ್ಯಾಂಕ್ ಖಾತೆ ತೆರೆಯುವಂತೆ ಪ್ರೇರೇಪಿಸಿದ್ದ. ನಂತರ ಆ ಖಾತೆಯ ಸಂಪೂರ್ಣ ನಿಯಂತ್ರಣ ಪಡೆದು, ಅಕ್ರಮ ಹಣ ವರ್ಗಾವಣೆಗೆ ಬಳಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 15 ಮ್ಯೂಲ್ (Mule) ಬ್ಯಾಂಕ್ ಖಾತೆಗಳು, 15 ಸಿಮ್ ಕಾರ್ಡ್‌ಗಳು, 11 ಎಟಿಎಂ ಕಾರ್ಡ್‌ಗಳು ಮತ್ತು 9 ಕ್ಯೂಆರ್ ಕೋಡ್ ಸ್ಕ್ಯಾನರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ.





Leave a comment