ದಾವಣಗೆರೆ: ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇ-ಪೌತಿ ಖಾತೆ ಅಭಿಯಾನ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ 91505 ಆಸ್ತಿಗಳು ಮೃತರ ಹೆಸರಿನಲ್ಲಿದ್ದು ಇದನ್ನು ಇ-ಪೌತಿ ಖಾತೆ ಅಭಿಯಾನದ ಮೂಲಕ ಖಾತೆ ಮಾಡಲು ಅಭಿಯಾನ ಪ್ರಾರಂಭಿಸಲಾಗಿದೆ. ಆದರೆ ದಾವಣಗೆರೆ ತಾಲೂಕಿನ ಪ್ರಗತಿ ಕಡಿಮೆ ಇದೆ, ಆದರೆ ಬೇರೆ ತಾಲ್ಲೂಕಿನವರು ಮಾಡಲು ಸಾಧ್ಯವಾಗಿದ್ದರೆ ಇಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಕೆಲಸದ ವಿಳಂಬಕ್ಕೆ ನೀಡಿದ ಸಬೂಬುಗಳನ್ನು ಸಚಿವರು ಸಾರಾಸಗಟಾಗಿ ತಿರಸ್ಕರಿಸಿದರು.
ನೀಡಲಾದ ಗುರಿ ಮತ್ತು ಸಾಧನೆಯಲ್ಲಿ ಭಾರೀ ವ್ಯತ್ಯಾಸ:
ನೀಡಲಾದ ಗುರಿ ಮತ್ತು ಸಾಧನೆಯಲ್ಲಿ ಭಾರಿ ವ್ಯತ್ಯಾಸವಿದೆ. ಇ-ಪೌತಿ ಅಭಿಯಾನದಲ್ಲಿ ತಾಲೂಕಿನಲ್ಲಿ ಸುಮಾರು 20636 ಅರ್ಜಿಗಳು ಬಾಕಿ ಇದ್ದು, ಈವರೆಗೆ ಕೇವಲ 728 ಅರ್ಜಿಗಳನ್ನು ಭೂಮಿ ಸಾಪ್ಟ್‍ವೇರ್ ಗೆ ಬರುವಂತೆ ಮಾಡಲಾಗಿದೆ. ಈ ಕಳಪೆ ಸಾಧನೆಯ ಬಗ್ಗೆ ತಹಶೀಲ್ದಾರ್ ಮತ್ತು ಸಿಬ್ಬಂದಿಯನ್ನು ಸಚಿವರು ಪ್ರಶ್ನಿಸಿ, ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು ಅಥವಾ ಒಟಿಪಿ ಸಮಸ್ಯೆಗಳನ್ನು ಮುಂದಿಟ್ಟು ಕೆಲಸ ವಿಳಂಬ ಮಾಡುತ್ತಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
“ಇದೇ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕೆಲಸವಾಗುತ್ತಿರುವಾಗ ದಾವಣಗೆರೆಯಲ್ಲಿ ಮಾತ್ರ ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಪ್ರಶ್ನಿಸಿದರು. ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಅತ್ಯುತ್ತಮವಾಗಿ ಕೆಲಸ ಮಾಡಿ ಒಬ್ಬರೇ 125ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡಿ ಸಾಧನೆ ಮಾಡಿದ್ದರೆ, ಶೇ. 50ರಷ್ಟು ಸಿಬ್ಬಂದಿ ಕನಿಷ್ಠ ಆಸಕ್ತಿ ತೋರದೆ ಇರುವುದು ಸಭೆಯಲ್ಲಿ ಚರ್ಚೆಯಾಯಿತು.
- (Title Deeds Distribution
- Bhoomi Software
- DAVANAGERE
- Digital Records.
- E-Pouti Campaign
- Krishna Byre Gowda
- Progress Review Meeting
- Revenue Department
- Village Administrative Officers
- ಇ-ಪೌತಿ ಅಭಿಯಾನ
- ಕಂದಾಯ ಇಲಾಖೆ
- ಕೃಷ್ಣ ಬೈರೇಗೌಡ
- ಗ್ರಾಮ ಆಡಳಿತ ಅಧಿಕಾರಿಗಳು
- ಡಿಜಿಟಲ್ ದಾಖಲೆಗಳು.
- ದಾವಣಗೆರೆ
- ಪ್ರಗತಿ ಪರಿಶೀಲನಾ ಸಭೆ
- ಭೂಮಿ ಸಾಫ್ಟ್ವೇರ್
- ಹಕ್ಕುಪತ್ರ ವಿತರಣೆ





Leave a comment