Site icon Kannada News-suddikshana

Karnataka Rajya Raitha Sangha: ಷರತ್ತಿಲ್ಲದೇ ಭೂ ಸುಧಾರಣಾ ಕಾಯ್ದೆ ರದ್ದುಪಡಿಸಬೇಕು: ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

Kodihalli ChandraShekhar

SUDDIKSHANA KANNADA NEWS/ DAVANAGERE/ DATE:11-07-2023

 

ದಾವಣಗೆರೆ: ಸಿಎಂ ಸಿದ್ದರಾಮಯ್ಯ ಅವರು, ಭೂ ಸುಧಾರಣಾ ಕಾಯ್ದೆ ರದ್ದುಪಡಿಸಬೇಕು. ಕೇಂದ್ರ ಸರ್ಕಾರ ನೇರವಾಗಿ ರದ್ದುಮಾಡಿದಂತೆ ರಾಜ್ಯದಲ್ಲಿಯೂ ಯಾವುದೇ ಷರತ್ತು ಇಲ್ಲದೆ ರದ್ದು ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ (Karnataka Rajya Raitha Sangha)ದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿದ್ದ ಮೂರು ಕೃಷಿ ಕಾಯಿದೆಗಳನ್ನು ವಾಪಸ್ ಪಡೆದಿದೆ. ಅದರಂತೆ ರಾಜ್ಯದಲ್ಲೂ ಕೂಡ ಯಾವುದೇ ಷರತ್ತುಗಳಿಲ್ಲದೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಅಲ್ಲದೇ ರಾಜ್ಯದಲ್ಲಿ ಇದೀಗ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಭೂ ಸುಧಾರಣೆ ಕಾಯಿದೆಯನ್ನು ವಾಪಸ್ ಪಡೆಯಬೇಕಾಗಿತ್ತು. ಆದರೆ ಕಳೆದ ತಿಂಗಳು ಅದನ್ನು ಪರಿಶೀಲನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆ ಹಲವಾರು ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಕಾರಣ ರಾಜ್ಯ ಸರ್ಕಾರ ಈ ಕೂಡಲೇ ರದ್ದು ಮಾಡಬೇಕೆಂದು ಆಗ್ರಹಿಸಿದರು.

ಕೃಷಿಭೂಮಿ ಇಡೀ ಜಗತ್ತಿಗೆ ಅನ್ನ ಹಾಕುವ ಅಕ್ಷಯ ಪಾತ್ರೆಯಾಗಿದ್ದು, ಕೇವಲ ಸರ್ಕಾರಗಳು ಮಾತ್ರವಲ್ಲದೆ ಇಡೀ ದೇಶದ ಜನತೆ ಕೃಷಿ ಭೂಮಿಯನ್ನು ರಕ್ಷಿಸುವಲ್ಲಿ ಮುಂದಾಗಬೇಕು. ಅಲ್ಲದೇ ಕೃಷಿ ಭೂಮಿ ವ್ಯಾಪಾರದ ವಸ್ತುವಾಗಬಾರದು
ಎಂದು ಆಗ್ರಹಿಸಿದರು.

ಈ ಸುದ್ದಿಯನ್ನೂ ಓದಿ: 

Amarnath Temple: ಕುದುರೆ ಮೇಲೂ ಹೋಗ್ಲಿಲ್ಲ, ನಡೆದುಕೊಂಡು ಹೋಗ್ಲಿಲ್ಲ.. ಬದುಕಿ ಬರಲು ಕಾರಣವಾದದ್ದು ಏನು…? ದಾವಣಗೆರೆ ಮಹಿಳೆಯರು ಬಿಚ್ಚಿಟ್ಟ ರೋಚಕ ಕಥೆ..!

ನಮ್ಮನ್ನು ಆಳುವ ಸರ್ಕಾರಗಳಿಗೆ ಮಾನ, ಮರ್ಯಾದೆ ಇದ್ದರೆ, ರೈತರು ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಮೂಲಕ ಎಂಎಸ್ ಪಿಗೆ ಸೂಕ್ತ ಮಾನದಂಡಗಳನ್ನು ರೂಪಿಸಬೇಕು. ಎಂ.ಎಸ್. ಸ್ವಾಮಿನಾಥನ್ ವರದಿಯ
ಪ್ರಕಾರ ಎಂಎಸ್ ಪಿ ದರಗಳು ನಿಗದಿ ಆಗಲಿ ಎಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಜು. 19ರಂದು ರೈತ ಸಂಘದಿಂದ ಹಿರಿಯ ಹೋರಾಟಗಾರರು, ರಾಜಕೀಯ ಧುರೀಣರಾದ ಹೆಚ್.ಎಸ್ ರುದ್ರಪ್ಪ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದ ಪ್ರವಾಸಿ ಮಂದಿರದಿಂದ ಅಂದು ಬೆಳಗ್ಗೆ 10.30ಕ್ಕೆ ರುದ್ರಪ್ಪನವರ ಭಾವಚಿತ್ರದ ಮೆರವಣಿಗೆ ಹೊರಡಲಿದೆ. 11.30ಕ್ಕೆ ಶಿವಮೊಗ್ಗ ತಾಲೂಕಿನ ಮತ್ತೂರು ಕ್ರಾಸ್ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಲಿದೆ ಎಂದರು.

ಖಾಸಗಿ ವಾಹಿನಿಯವರು ನನ್ನ ಮೇಲೆ ಮಾಡಿದ್ದ ಆರೋಪಕ್ಕೆ ನ್ಯಾಯಾಲಯವು ಸಮನ್ಸ್ ನೀಡಿದೆ. ಇದು ನನ್ನ ಪ್ರಾಮಾಣಿಕತೆಗೆ ಸಂದ ಜಯ. ಬಿಎಂಆರ್ ಟಿಸಿ ಹಾಗೂ ಕೆಎಸ್ ಆರ್ ಟಿಸಿ ನೌಕರರ ಹೋರಾಟ ಹಿಂಪಡೆಯಲು ಸುಮಾರು 35 ಕೋಟಿ ರೂಪಾಯಿ ಪಡೆದು ವಂಚನೆ ಮಾಡಿದ್ದೇನೆ ಎಂದು ಖಾಸಗಿ ವಾಹಿನಿಯೊಂದು ನನ್ನನ್ನು ಖಳನಾಯಕ, ಮೋಸಗಾರ, ಸುಳ್ಳುಗಾರ ಎಂಬ ಪದ ಬಳಕೆ ಮಾಡಿ ನನ್ನ ತೇಜೋವಧೆ ಮಾಡಿತ್ತು. ಇದರ ಜೊತೆ ದೆಹಲಿಯಲ್ಲಿ ನಡೆಯುತ್ತಿದ್ದ ರೈತ ಹೋರಾಟವನ್ನು ಮುಕ್ತಾಯಗೊಳಿಸುತ್ತೇನೆ ಎಂದು ಸುಮಾರು ಕೋಟಿಗಟ್ಟಲೇ ಹಣ ಮಾಡಿದ್ದೇನೆ ಎಂದು ನಿರಂತರ ಸುದ್ದಿ ಮಾಡುವುದರ ಮೂಲಕ ರೈತ ಸಂಘಕ್ಕೆ(Karnataka Rajya Raitha Sangha) ಕೆಟ್ಟ ಅಪವಾದ ಹೊರಿಸಲಾಗಿತ್ತು.ಈ ಬಗ್ಗೆ ವಾಹಿನಿಯ ಮುಖ್ಯಸ್ಥರು,ನಿರೂಪಕರು ಹಾಗೂ ಇತರರ ಮೇಲೆ ಬೆಂಗಳೂರಿನ ಅಡಿಷನಲ್ ಚೀಫ್ ಮ್ಯಾಜಿಸ್ಟ್ರೇಟರ್ ಕೋರ್ಟ್ ಕಳೆದ ಜುಲೈ 7 ರಂದು ಕ್ರಿಮಿನಲ್ ಮೊಕದ್ದಮೆ ಐಪಿಸಿ 499 ಮತ್ತು ಐಪಿಸಿ 500ರಡಿ ಮೊಕದ್ದಮೆ ದಾಖಲಿಸಿಕೊಂಡು ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಎಚ್ಚರಿಕೆಯ ಸಮನ್ಸ್ ನೀಡಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಶತಕೋಟಿ ಬಸವಣ್ಣ, ಮಹಾದೇವಿ ಬೇವಿನಾಳ್ ಮಠ, ಚನ್ನಬಸಪ್ಪ ಮಲ್ಲಶೆಟ್ಟಿಹಳ್ಳಿ, ಆರಾಧ್ಯ, ಚಿನ್ನಸಮುದ್ರ ಶೇಖರ್ ನಾಯ್ಕ್ ಉಪಸ್ಥಿತರಿದ್ದರು.

 

Karnataka Rajya Raitha Sangha Pressmeet, Karnataka Rajya Raitha Sangha, Karnataka Rajya Raitha Sangha Angry, Karnataka Rajya Raitha Sangha Program 

Exit mobile version