Site icon Kannada News-suddikshana

ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ- ರೆಡ್‌ ಅಲರ್ಟ್‌ ಘೊಷಣೆ

ಬೆಂಗಳೂರು: ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಹಾವೇರಿ, ಶಿವಮೊಗ್ಗಕ್ಕೆ ಆರೆಂಜ್​ ಅಲರ್ಟ್​, ಕಜಲಬುರಗಿ, ರಾಯಚೂರು, ಯಾದಗಿರಿ, ದಾವಣಗೆರೆಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ ಕೂಡ ಮಳೆಯಾಗಲಿದೆ. ಗೇರುಸೊಪ್ಪ, ಕಾರವಾರ, ಕೋಟ, ಕ್ಯಾಸಲ್​ರಾಕ್, ಅಂಕೋಲಾದಲ್ಲಿ ಹೆಚ್ಚು ಮಳೆಯಾಗಿದೆ.

ಗೋಕರ್ಣ, ಕದ್ರಾ, ಶಿರಾಲಿ, ಆಲಮಟ್ಟಿ, ಆಗುಂಬೆ, ಸಿದ್ದಾಪುರ, ಮಂಗಳೂರು ವಿಮಾನ ನಿಲ್ದಾಣ, ಲಿಂಗನಮಕ್ಕಿ, ಮಂಕಿ, ಕುಂದಾಪುರ, ಬೆಳಗಾವಿ, ಪಣಂಬೂರು, ಮುಲ್ಕಿ, ಪುತ್ತೂರು, ನಿಪ್ಪಾಣಿ, ತಾಳಗುಪ್ಪದಲ್ಲಿ ಮಳೆಯಾಗಿದೆ. ಉಡುಪಿ, ತಾಳಿಕೋಟೆ, ಬಿಳಗಿ, ಶೃಂಗೇರಿ, ಭಾಗಮಂಡಲ, ಸುಳ್ಯ, ಉಪ್ಪಿನಂಗಡಿ, ಮಂಗಳೂರು, ಮಾಣಿ, ಸೇಡಬಾಳ, ಬಾಳೆಹೊನ್ನೂರು, ಜಯಪುರ, ಚಿಕ್ಕೋಡಿ, ಬೆಳ್ತಂಗಡಿ, ಕಳಸ, ಜೋಯಿಡಾ, ಸಿದ್ದಾಪುರ, ಕಿರವತ್ತಿ, ಜೇವರ್ಗಿ, ಯಲ್ಲಾಪುರ, ಕೊಪ್ಪ, ಅಣ್ಣಿಗೆರೆ, ಧಾರವಾಡ, ಗೋಕಾಕ,ಸವಣೂರು, ಬೈಲಹೊಂಗಲ, ಸೇಡಂ, ಎಚ್​ಡಿ ಕೋಟೆಯಲ್ಲಿ ಮಳೆಯಾಗಿದೆ.ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆಯಾಗುವ ನಿರೀಕ್ಷೆ ಇದೆ.

Exit mobile version