Home ದಾವಣಗೆರೆ ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳಿಗೆ ಅರ್ಜಿ ಆಹ್ವಾನ: ಪರೀಕ್ಷೆ ಇಲ್ಲ, SSLC ಮೆರಿಟ್ ಆಧಾರದಲ್ಲಿ ಆಯ್ಕೆ
ದಾವಣಗೆರೆಉದ್ಯೋಗ ವಾರ್ತೆಬೆಂಗಳೂರು

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಹುದ್ದೆಗಳಿಗೆ ಅರ್ಜಿ ಆಹ್ವಾನ: ಪರೀಕ್ಷೆ ಇಲ್ಲ, SSLC ಮೆರಿಟ್ ಆಧಾರದಲ್ಲಿ ಆಯ್ಕೆ

Share
ಕರ್ನಾಟಕ
Share

ಬೆಂಗಳೂರು: ಕರ್ನಾಟಕ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಅರಣ್ಯ ಇಲಾಖೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಅರಣ್ಯ ಇಲಾಖೆಯು (KFD) ಖಾಲಿ ಇರುವ 750 ‘ಫಾರೆಸ್ಟ್ ಅಬ್ಸರ್ವರ್’ (ಅರಣ್ಯ ವೀಕ್ಷಕರು – Group D) ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

  • ಇಲಾಖೆ: ಕರ್ನಾಟಕ ಅರಣ್ಯ ಇಲಾಖೆ (KFD)

  • ಹುದ್ದೆಯ ಹೆಸರು: ಫಾರೆಸ್ಟ್ ಅಬ್ಸರ್ವರ್ / ಅರಣ್ಯ ವೀಕ್ಷಕರು

  • ಮೊತ್ತ ಹುದ್ದೆಗಳು: 750

  • ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ (13 ಅರಣ್ಯ ವೃತ್ತಗಳು)

ವೃತ್ತವಾರು ಖಾಲಿ ಹುದ್ದೆಗಳ ಪಟ್ಟಿ:

ಚಾಮರಾಜನಗರ – 169, ಮೈಸೂರು – 120, ಬೆಂಗಳೂರು – 70, ಬಳ್ಳಾರಿ – 62, ಕೆನರಾ (ಉತ್ತರ ಕನ್ನಡ) – 60, ಚಿಕ್ಕಬಳ್ಳಾಪುರ – 56, ಮಂಗಳೂರು – 54, ಬೆಳಗಾವಿ – 42, ಶಿವಮೊಗ್ಗ – 38, ಕೊಡಗು – 32, ಹಾಸನ – 30, ಧಾರವಾಡ – 12, ಹಾಗೂ ಕಲ್ಬುರ್ಗಿ – 04.

ಶೈಕ್ಷಣಿಕ ಅರ್ಹತೆ & ವಯೋಮಿತಿ:

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC) ತೇರ್ಗಡೆಯಾಗಿರಬೇಕು.

  • ವಯೋಮಿತಿ: ಸಾಮಾನ್ಯ ವರ್ಗಕ್ಕೆ 18 ರಿಂದ 30 ವರ್ಷ. ಹಿಂದುಳಿದ ವರ್ಗಗಳಿಗೆ (2A/2B/3A/3B) 33 ವರ್ಷ ಹಾಗೂ SC/ST/Cat-1 ಅಭ್ಯರ್ಥಿಗಳಿಗೆ 35 ವರ್ಷದವರೆಗೆ ವಯೋಮಿತಿ ಸಡಲಿಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಯಾವುದೇ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಇರುವುದಿಲ್ಲ. SSLC ಅಂಕಗಳ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ದೈಹಿಕ ಪರೀಕ್ಷೆ (Physical Test) ಮತ್ತು ವೈದ್ಯಕೀಯ ಪರೀಕ್ಷೆ (Medical Test) ನಡೆಸಿ ಆಯ್ಕೆ ಮಾಡಲಾಗುತ್ತದೆ.

ಮುಖ್ಯ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 01 ಆಗಸ್ಟ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026

  • ಅಧಿಕೃತ ವೆಬ್‌ಸೈಟ್: aranya.gov.in

Share

Leave a comment

Leave a Reply

Your email address will not be published. Required fields are marked *