ಬೆಂಗಳೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,207 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಕಾರ್ಯಕಾರಿ ಪ್ರಕ್ರಿಯೆ ಆರಂಭಿಸಿದೆ. ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ.
ಹುದ್ದೆಗಳ ವಿವರ:
ಅಬಕಾರಿ ಪೇದೆ (Excise Constable): 942 ಹುದ್ದೆಗಳು
ಅಬಕಾರಿ ಉಪ ನಿರೀಕ್ಷಕರು (ESI): 265 ಹುದ್ದೆಗಳು
ಒಟ್ಟು ಹುದ್ದೆಗಳು: 1,207
ಶೈಕ್ಷಣಿಕ ಅರ್ಹತೆ & ವಯೋಮಿತಿ:
ಅಬಕಾರಿ ಪೇದೆ ಹುದ್ದೆಗೆ ದ್ವಿತೀಯ ಪಿಯುಸಿ (PUC) ಹಾಗೂ ಸಬ್ ಇನ್ಸ್‌ಪೆಕ್ಟರ್ (ESI) ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪೂರ್ಣಗೊಳಿಸಿರಬೇಕು.
ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ಹೊಸ ನಿಯಮಗಳ ಪ್ರಕಾರ 2A, 2B, 3A, 3B ವರ್ಗದವರಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಮಾಜಿ ಸೈನಿಕ/ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಸಿಗಲಿದೆ.
ವೇತನ ಶ್ರೇಣಿ:
ಅಬಕಾರಿ ಪೇದೆ: ₹21,400 – ₹42,000/- (ಪ್ರತಿ ತಿಂಗಳು)
ಅಬಕಾರಿ ಉಪ ನಿರೀಕ್ಷಕರು: ₹30,350 – ₹58,250/- (ಪ್ರತಿ ತಿಂಗಳು)
ಪ್ರಮುಖ ಬದಲಾವಣೆಗಳು:
ಈ ಬಾರಿಯ ನೇಮಕಾತಿಯಲ್ಲಿ ರಾಜ್ಯ ಸರ್ಕಾರವು ಪ್ರಮುಖ ಬದಲಾವಣೆ ಮಾಡಿದ್ದು, ಜಿಲ್ಲಾವಾರು ಆಯ್ಕೆ ಪಟ್ಟಿಯ ಬದಲಿಗೆ ಇಡೀ ರಾಜ್ಯಕ್ಕೆ ಒಂದೇ ರಾಜ್ಯಮಟ್ಟದ ಮೆರಿಟ್ ಪಟ್ಟಿ ಪ್ರಕಟಿಸಲಾಗುತ್ತದೆ. ಅಲ್ಲದೆ, ಪುರುಷ ಮತ್ತು ಮಹಿಳಾ ಪೇದೆ ವೃಂದಗಳನ್ನು ವಿಲೀನಗೊಳಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ stateexcise.karnataka.gov.in ಮೂಲಕ ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸಬಹುದು.
- Degree Jobs Karnataka
- ESI Notification Karnataka
- Excise Sub Inspector Recruitment 2026
- Govt Jobs in Karnataka 2026
- Karnataka Excise Constable Vacancy
- Karnataka Excise Department Recruitment 2026
- PUC Jobs Karnataka
- State Excise Karnataka Vacancy
- ಅಬಕಾರಿ ಕಾನ್ಸ್ಟೇಬಲ್ ಸಂಬಳ
- ಅಬಕಾರಿ ಪೇದೆ ಹುದ್ದೆಗಳು
- ಅಬಕಾರಿ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ
- ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2026
- ಕರ್ನಾಟಕ ಸರ್ಕಾರಿ ಕೆಲಸಗಳು 2026
- ಸರ್ಕಾರಿ ಉದ್ಯೋಗ ಮಾಹಿತಿ.





Leave a comment