ಬೆಂಗಳೂರು: ತ್ವರಿತಗತಿಯ ಮತ್ತು ಪಾರದರ್ಶಕ ಆಡಳಿತಕ್ಕೆ ತಂತ್ರಜ್ಞಾನದ ಬಳಕೆ ಅತ್ಯಂತ ಪರಿಣಾಮಕಾರಿ. ತಂತ್ರಜ್ಞಾನ ಆಧಾರಿತ ಇ-ಆಫೀಸ್ ವ್ಯವಸ್ಥೆಯಿಂದ ಆಡಳಿತಾತ್ಮಕ ವಿಷಯಗಳು ವೇಗ ಪಡೆದುಕೊಂಡಿದೆ. ಹಲವು ಪ್ರಥಮಗಳನ್ನು ಸಾಧಿಸಿದ ಕಲಬುರಗಿ ಜಿಲ್ಲೆಯ ಹೆಗ್ಗಳಿಕೆಗೆ ಮತ್ತೊಂದು ಸೇರ್ಪಡೆ ಎಂಬಂತೆ ಇ-ಆಫೀಸ್ ಬಳಕೆಯಲ್ಲಿ ಕಲಬುರಗಿಯು ರಾಜ್ಯದಲ್ಲೇ ನಂಬರ್ 1 ಜಿಲ್ಲೆಯಾಗಿ ಕಲಬುರಗಿ ಹೊರಹೊಮ್ಮಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆ ಅಲೆಯುವುದನ್ನು ತಪ್ಪಿಸುವಲ್ಲಿ ಇ-ಆಡಳಿತವು ಮಹತ್ವದ ಪಾತ್ರ ವಹಿಸುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಬಳಸಿಕೊಂಡು 2,938 ಇ-ಕಡತ ಸೃಷ್ಟಿ, 54,381 ಇ-ಕಡತ ವಿಲೇವಾರಿ, 13,664 ಇ-ರಸೀದಿ ಸೃಷ್ಟಿ, 3,52,221 ಇ-ರಸೀದಿ ವಿಲೇವಾರಿ ಮಾಡಲಾಗಿದೆ.
ತಂತ್ರಜ್ಞಾನ ಬಳಕೆಯಿಂದ ಸುಗಮ ಆಡಳಿತವನ್ನು ಒದಗಿಸುವಲ್ಲಿ ರಾಜ್ಯಕ್ಕೆ ಕಲಬುರಗಿ ಮಾದರಿಯಾಗಿ ಹೊರಹೊಮ್ಮಿದ. ಪ್ರಗತಿಪರ ಮತ್ತು ಜನಪರ ಆಡಳಿತಕ್ಕೆ ಒತ್ತು ನೀಡುವಲ್ಲಿ ನಮ್ಮ ಬದ್ಧತೆ ಅಚಲವಾದುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.





Leave a comment