Site icon Kannada News-suddikshana

ಕಲಬುರಗಿ(Kalaburagi)ಯಲ್ಲಿ ಪಿಸ್ತೂಲ್ ಗುಂಡು ಹೊಡೆದ ಪತ್ನಿ ಕೊಂದ ಪಾಪಿ ಪತಿ….!

KALABURAGI MURDER

KALABURAGI MURDER

SUDDIKSHANA KANNADA NEWS/ KALABURAGI/ DATE:14-09-2023

ಕಲಬುರಗಿ (Kalaburagi): ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಆಲೂರು (ಕೆ) ಗ್ರಾಮದಲ್ಲಿ ಪತ್ನಿ ಮೇಲೆ ಗುಂಡು ಹಾರಿಸಿ ಪತಿಯೇ ಹತ್ಯೆಗೈದ ಘಟನೆ ನಡೆದಿದೆ.

ಹನಮವ್ವ (36) ಕೊಲೆಯಾದ ಮಹಿಳೆ. ಬಸವರಾಜ್ ಕೊಲೆ ಮಾಡಿದ ಆರೋಪಿ. ಹತ್ಯೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದಾನೆ. ಕಳೆದ 18 ವರ್ಷಗಳ ಹಿಂದೆ ಆಲೂರು (ಬಿ) ಗ್ರಾಮದ ಹನುಮವ್ವಳ ಜೊತೆ ಬಸವರಾಜ್ ಮದುವೆಯಾಗಿದ್ದ. ವಿವಾಹವಾಗಿದಾಗಿನಿಂದಲೂ ಪತ್ನಿ ಜೊತೆ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತು ಆಗಾಗ್ಗೆ ತವರು ಮನೆಗೆ
ಹೋಗುತ್ತಿದ್ದರು. ಈ ಸಂಬಂಧ ಹಲವು ಬಾರಿ ರಾಜಿ ಪಂಚಾಯಿತಿಯೂ ನಡೆದಿತ್ತು. ಆದರೂ ಕುಡಿಯುವುದನ್ನು ಬಸವರಾಜ್ ಬಿಟ್ಟಿರಲಿಲ್ಲ.

ಈ ಸುದ್ದಿಯನ್ನೂ ಓದಿ: 

ಚೈತ್ರಾ ಕುಂದಾಪುರ (Kundapur) ಅಂಡ್ ಗ್ಯಾಂಗ್ ನ ಒಂದೊಂದೇ ಕರ್ಮಕಾಂಡ ಬಯಲಿಗೆ…? ಮಾಹಿತಿ ನೀಡಿದಾತನಿಗೆ ಹಾಕಿದ್ರಾ ಬೆದರಿಕೆ? ಏನೀ ವಂಚನೆ ಲೀಲೆ… ಇನ್ನೂ ಸಿಗದ ಹಾಲಶ್ರೀ ಸ್ವಾಮಿ ?

ಕಳೆದ ಎರಡು ದಿನಗಳ ಹಿಂದೆ ಜಗಳವಾಗಿ ಮತ್ತೆ ಹನುಮವ್ವ ತವರು ಮನೆಗೆ ಹೋಗಿದ್ದಳು. ಅಲ್ಲಿಗೂ ಹೋಗಿ ಗಲಾಟೆ ಮಾಡಿದ್ದ. ಇಬ್ಬರ ನಡುವೆ ಜಗಳ ಜೋರಾಗಿತ್ತು. ಇದರಿಂದ ರೊಚ್ಚಿಗೆದ್ದ ಬಸವರಾಜ್, ಮನೆಗೆ ಬರುವಂತೆ ಪೀಡಿಸಿದ. ಎರಡು ದಿನಗಳ ಬಳಿಕ ಬರುವುದಾಗಿ ಹೇಳಿ ಹನುಮವ್ವ ಕಳುಹಿಸಿದ್ದರು. ಇಂದು ವಿಪರೀತ ಮದ್ಯಪಾನ ಮಾಡಿ ಹೋಗಿದ್ದ ಬಸವರಾಜ್ ಮನೆಯಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಪತ್ನಿ ಮೇಲೆ ಎರಗಿ ಎರಡು ಸುತ್ತು ಗುಂಡು ಹಾರಿಸಿ ಕೊಲೆಗೈದು ಓಡಿ ಹೋಗಿದ್ದಾನೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Exit mobile version