Site icon Kannada News-suddikshana

Kalaburagi:ಮೊಬೈಲ್, ಬೆಲೆ ಬಾಳುವ ವಸ್ತು ಕದ್ದು ಓಡುತ್ತಿದ್ದವನಿಗೆ ಸಾರ್ವಜನಿಕರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ…!

KALBURAGI CRIME NEWS

KALBURAGI CRIME NEWS

SUDDIKSHANA KANNADA NEWS/KALABURAGI/ DATE:04-09-2023

ಕಲಬುರಗಿ (Kalaburagi): ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಚಲಿಸಲು ಪ್ರಾರಂಭವಾಗುತ್ತಿದ್ದಂತೆ ಪ್ರಯಾಣಿಕರಿಂದ ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತು ದೋಚಿ ಓಡಿ ಹೋಗುತ್ತಿದ್ದ ಕಳ್ಳನನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ಕೊಟ್ಟ ಘಟನೆ ನಡೆದಿದೆ.

ಭಾನುವಾರ ರಾತ್ರಿ 11 ಗಂಟೆಗೆ ಚಿಕ್ಕೋಡಿ ಮೂಲದ ಓರ್ವ ಮಹಿಳೆ ಹಾಗೂ ಪುರುಷರೊಬ್ಬರು ಕಲಬುರಗಿ – ವಿಜಯಪುರ ಸಾರಿಗೆ ಬಸ್ ನಲ್ಲಿ‌‌ ಕುಳಿತಿದ್ದರು. ಇನ್ನೇನೂ ಬಸ್ ಹೊರಡುತ್ತಿದ್ದಂತೆ ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತು ಕಿತ್ತುಕೊಂಡು
ಪರಾರಿಯಾಗುತ್ತಿದ್ದ. ಈ ವೇಳೆ ಬಸ್ ನಿಂದ ಇಳಿದು ಕಳ್ಳನನ್ನು ಹಿಡಿದ ಪ್ರಯಾಣಿಕರು ಬಿಸಿ ಬಿಸಿ ಕಜ್ಜಾಯ ಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: 

Kalaburagi: ಮಾವ ಮಾವ ಅಂದ್ಕೊಳ್ಳಿ ಅಂತಾ ಮೈಕೈ ಮುಟ್ಟುತ್ತಿದ್ದ ಪ್ರಭಾರಿ ಮುಖ್ಯೋಪಾಧ್ಯಾಯನಿಗೆ ವಾಡಿ ಪೊಲೀಸರ ಡ್ರಿಲ್…!

ಕಳ್ಳತನ ಮಾಡಿದ ಬಳಿಕ ಓಡಿದ ಕಳ್ಳನನ್ನು ಹಿಡಿದ ಸಾರ್ವಜನಿಕರು ನೋಡನೋಡುತ್ತಿದ್ದಂತೆ ಹೊಡೆತ ಕೊಟ್ಟರು. ಕಳ್ಳತನ ಮಾಡಲು ಬಂದಿದ್ದವನಿಗೆ ತಕ್ಕ ಶಾಸ್ತಿ ಮಾಡಿದರು. ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾರ್ವಜನಿಕರು ಬಿಡಲಿಲ್ಲ. ಬಳಿಕ ಪೊಲೀಸ್ ಠಾಣೆಗೆ ಪ್ರಯಾಣಿಕರು ಎಳೆದೊಯ್ದರು.

ಬಸ್ ನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರು ಹುಷಾರಾಗಿರಬೇಕು. ಕಳ್ಳರು ಗಮನ ಬೇರೆಡೆ ಸೆಳೆದು ದೋಚಿ ಪರಾರಿಯಾಗುತ್ತಾರೆ. ಸ್ವಲ್ಪ ಯಾಮಾರಿದರೂ ಸಹ ಕೈಗೆ ಸಿಗುವುದಿಲ್ಲ. ಇಂಥ ಅನೇಕ ಘಟನೆಗಳು ನಡೆದಿದ್ದು, ಜನರು ಎಚ್ಚರದಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

 

 

Exit mobile version