Site icon Kannada News-suddikshana

ಮಹಾರಾಣಿ ಮಹಿಳಾ ಟಿ-20 ಕಪ್ ಟೂರ್ನಿ: ಮೈಸೂರು ವಾರಿಯರ್ಸ್ ತಂಡಕ್ಕೆ ದಾವಣಗೆರೆಯ ಕೆ. ವಿ. ದಿಶಾ

Davanagere

SUDDIKSHANA KANNADA NEWS/ DAVANAGERE/DATE: 02_08_2025

ದಾವಣಗೆರೆ: ಮಹಾರಾಣಿ ಕಪ್ ಟೂರ್ನಿಯ ಮೈಸೂರು ವಾರಿಯರ್ಸ್ ತಂಡಕ್ಕೆ ದಾವಣಗೆರೆಯ ಕೆ. ವಿ. ದಿಶಾ ಆಯ್ಕೆಯಾಗಿದ್ದಾರೆ.

READ ALSO THIS STORY: ‘ಪಾರ್ಟಿಗಳಿಗೆ ಹೋಗಬೇಡಿ, ಹೋದ್ರೆ ನಿಮ್ಮ ಮೇಲೆ ಅತ್ಯಾಚಾರವಾಗುತ್ತದೆ’: ಕಿಡಿ ಹೊತ್ತಿಸಿದ ಪೋಸ್ಟರ್!

ನಗರದ ಯುವ ಪ್ರತಿಭೆ ದಿಶಾ ಕೆ.ವಿ. ದಾವಣಗೆರೆಯ ವೆಂಕಟೇಶ್ ಕೆ.ಎನ್. ಅವರ ಪುತ್ರಿ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಇದೇ ಮೊದಲ ಬಾರಿಗೆ ಆಯೋಜಿಸಿರುವ “ಮಹಾರಾಣಿ ಕಪ್” ಮಹಿಳಾ ಟಿ-20 ಕ್ರಿಕೆಟ್ ಟೂರ್ನಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ರಾಜ್ಯಮಟ್ಟದ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ದೊರೆತಿರುವುದು ದಿಶಾ ಕೆ.ವಿ. ಅವರ ಕ್ರಿಕೆಟ್ ನೈಪುಣ್ಯತೆಗೆ ಸಾಕ್ಷಿ. ಈ ಕ್ಷೇತ್ರದಲ್ಲಿ ತೋರಿಸಿರುವ ಶ್ರಮ, ನಿಷ್ಠೆ ಮತ್ತು ಪ್ರತಿಭೆ ಈ ಆಯ್ಕೆಯ ಮೂಲಕ ಪುನಃ ಸಾಬೀತಾಗಿದೆ.

ಇದು ದಾವಣಗೆರೆಯ ಕ್ರಿಕೆಟ್ ವಲಯಕ್ಕೂ ಗೌರವದ ವಿಷಯವಾಗಿದ್ದು, ಇವರು ಇತರ ಯುವ ಆಟಗಾರಿಯರಿಗೆ ಪ್ರೇರಣೆಯಾಗಿದ್ದಾರೆ. ದಿಶಾ ಕೆ.ವಿ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಪೋಷಕರು, ಕ್ರೀಡಾಭಿಮಾನಿಗಳು ಹಾರೈಸಿದ್ದಾರೆ.

ಕೆ. ವಿ. ದಿಶಾ ಸಾಧನೆ

Played U15 State Propbals (2022-2023)

Played U19 State Propbals T20 (2023-2024)

Played U19 State Propbals ODI

Played U19 Zonal T20 (2024-2025)

CLUB MATCHES

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ತುಮಕೂರು ವಲಯದ ಕಾರ್ಯದರ್ಶಿಯಾದ ಶಶಿಧರ್, ತರಬೇತುದಾರರಾದ ಎಲ್.ಎಂ. ಪ್ರಕಾಶ್, ಕೆ.ಎನ್.ಗೋಪಾಲಕೃಷ್ಣ, ಮಹೇಶ್ ಪಟೇಲ್ (ಮಧು), ಲಲ್ಲು, ತಿಮ್ಮೇಶ್, ಉಮೇಶ್ ಸಿರಿಗೆರೆ, ಎಸ್.ಬಿ.ಟಿ. ಮಹದೇವ್, ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ, ಮಾಲತೇಶ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ದಿಶಾ ಕೆ.ವಿ. ಮಹಿಳಾ ಟಿ-20 ಕ್ರಿಕೆಟ್ ಟೂರ್ನಿಗೆ ಮೈಸೂರು ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಿದ್ದಾರೆ.

Exit mobile version