ದಾವಣಗೆರೆ: ನಿವೃತ್ತ ಶಿಕ್ಷಕರಾದ ಕೆ. ಜಿ. ಕುಬೇರಪ್ಪ ಗೌಡ್ರು ನಿಧನರಾಗಿದ್ದಾರೆ. ಮೃತರಿಗೆ 84 ವರ್ಷ ವಯಸ್ಸಾಗಿತ್ತು.
READ ALSO THIS STORY: ತುಂಗಭದ್ರ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್ಸ್ ನೀರು: ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ನದಿ, ಹೆಲ್ಪ್ ಲೈನ್ ನಂಬರ್ ಇಲ್ಲಿದೆ ನೋಡಿ!
ನಗರದ ಕುವೆಂಪು ನಗರದ ವಾಸಿ, ಬಡಾವಣೆ ಪೊಲೀಸ್ ಠಾಣೆ ಎದುರಿನ ಮಹಾತ್ಮ ವಿದ್ಯಾ ಶಾಲೆಯ ನಿವೃತ್ತ ಶಿಕ್ಷಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಿರಿಯ ಶಿಕ್ಷಕರಾಗಿದ್ದ ಕೆ.ಜಿ.ಕುಬೇರಪ್ಪ ಗೌಡ್ರು ಸಾವಿರಾರು ವಿದ್ಯಾರ್ಥಿಗಳಿಗೆ
ಶಿಕ್ಷಣ ನೀಡಿದ್ದವರು.
ಮೃತರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನಾದ ಜಿಲ್ಲಾ ಕ್ರೀಡಾಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಗೌಡ ಹಾಗೂ ಬಂಧು-ಬಳಗ ಹಾಗೂ ಅಪಾರ ಶಿಷ್ಯ, ಬಂಧು ಬಳಗದವರನ್ನು ಅಗಲಿದ್ದಾರೆ.
ಜು.28ರಂದು ಸೋಮವಾರ ಮಧ್ಯಾಹ್ನ ಕುಂಬಳೂರು ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.
ಸಂತಾಪ:
ನಿವೃತ್ತ ಶಿಕ್ಷಕ ಕೆ.ಜಿ.ಕುಬೇರಪ್ಪ ಗೌಡ್ರು ನಿಧನಕ್ಕೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಯುವ ಮುಖಂಡ ಶ್ರೀನಿವಾಸ ವಿ.ಶಿವಗಂಗಾ, ಕುರುಡಿ ಗಿರೀಶ, ರೊಳ್ಳಿ ಮಂಜುನಾಥ ಸೇರಿದಂತೆ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ.