Site icon Kannada News-suddikshana

ಅಜೀರ್ಣ ಮತ್ತು ಅತಿಸಾರದ ಸಮಸ್ಯೆ ನಿವಾರಣೆ ಮಾಡಲು ಈ ಜ್ಯೂಸ್ ಗಳನ್ನ ಸೇವಿಸಿ!

ಅಜೀರ್ಣದ ಸಮಸ್ಯೆ ಇದ್ದರೆ ಆಗ ಯಾವುದೇ ಆಹಾರ ಸೇವಿಸಿದರೂ ಅದು ಜೀರ್ಣವಾಗದೆ ಹೊಟ್ಟೆಯಲ್ಲಿ ಅಸಿಡಿಟಿ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆ ಉಂಟು ಮಾಡುವುದು.

ಇಂತಹ ಸಮಸ್ಯೆ ನಿವಾರಣೆ ಮಾಡಲು ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಇದರ ಪ್ರಯೋಜನ ಕಡಿಮೆ ಎನ್ನಬಹುದು. ಔಷಧಿಯು ತುಂಬಾ ರುಚಿಕರವೂ ಆಗಿದ್ದರೆ ಆಗ ಖಂಡಿತವಾಗಿಯೂ ಇದನ್ನು ಪ್ರತಿಯೊಬ್ಬರು ಸೇವಿಸುವರು. ಅದು ಔಷಧಿಯೆಂದು ಅನಿಸದು. ದೇಹದಲ್ಲಿ ಕಾಡುವಂತಹ ಅಜೀರ್ಣ ಮತ್ತು ಅತಿಸಾರದ ಸಮಸ್ಯೆ ನಿವಾರಣೆ ಮಾಡಲು ಕೆಲವು ಜ್ಯೂಸ್ ಗಳು ತುಂಬಾ ಪರಿಣಾಮಕಾರಿ ಎಂದು ಕಂಡುಕೊಳ್ಳಲಾಗಿದೆ.

ಇವುಗಳ ಸೇವನೆಯಿಂದ ಅಜೀರ್ಣ ಮತ್ತು ಅತಿಸಾರದ ಸಮಸ್ಯೆಯಿದ್ದರೆ ಅದು ನಿವಾರಣೆ ಮಾಡಬಹುದು. ನೀವು ಇದನ್ನು ಔಷಧಿ ಎಂದು ಪರಿಗಣಿಸದೆ ಕೇವಲ ಜ್ಯೂಸ್ ಎಂದು ಭಾವಿಸಿ ಕುಡಿದರೂ ಅದು ನಿಮ್ಮ ಸಮಸ್ಯೆ ನಿವಾರಣೆ ಮಾಡುವುದು. ಇಂತಹ ಕೆಲವು ತಾಜಾ ಜ್ಯೂಸ್ ಗಳ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ನೀವು ಇದನ್ನು ಬಳಸಿಕೊಂಡು ಇದರ ಲಾಭ ಪಡೆದುಕೊಳ್ಳಬಹುದು. ಸೇಬಿನಲ್ಲಿ ಸೊರ್ಬಿಟೊಲ್ ಎನ್ನುವ ಸಕ್ಕರೆ ಅಂಶವಿದ್ದು, ಇದು ತುಂಬಾ ಪರಿಣಾಮಕಾರಿ ಆಗಿದೆ. ಇದು ಜೀರ್ಣಕ್ರಿಯೆ ನಿಯಂತ್ರಿಸುವುದು ಮತ್ತು ಜೀರ್ಣಕ್ರಿಯೆಗೆ ವೇಗ ನೀಡುವುದು. ಸೇಬಿನಲ್ಲಿ ಕಬ್ಬಿನಾಂಶ ಮತ್ತು ಇತರ ಕೆಲವು ಖನಿಜಾಂಶಗಳಿದ್ದು, ಇವು ಜಠರಕರುಳಿನ ಪ್ರಕ್ರಿಯೆಗೆ ವೇಗ ನೀಡುವುದು. ಆರೋಗ್ಯವಾಗಿ ಇರಬೇಕಾದರೆ ಕೆಲವು ತರಕಾರಿಗಳ ಸೇವನೆ ಅತೀ ಅಗತ್ಯ.

ಇದರಲ್ಲಿ ಸೌತೆಕಾಯಿ ಕೂಡ ಒಂದು. ಸೌತೆಕಾಯಿಯು ನಿರ್ಜಲೀಕರಣದಿಂದ ರಕ್ಷಣೆ ನೀಡುವುದು. ಸೌತೆಕಾಯಿ ಜ್ಯೂಸ್ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುವುದು ಮಾತ್ರವಲ್ಲದೆ ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆ ನಿವಾರಿಸುವುದು. ಹೀಗಾಗಿ ಬೇಸಗೆಯಲ್ಲಿ ಸೌತೆಕಾಯಿ ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ.

ಸೌತೆಕಾಯಿ ಜ್ಯೂಸ್ ನಲ್ಲಿ ಹೆಚ್ಚಿನ ನೀರಿನಾಂಶವಿದೆ ಮತ್ತು ಇದು ಕರುಳನ್ನು ನಿಯಂತ್ರಿಸುವುದು. ಇದು ಹೊಟ್ಟೆಯನ್ನು ಶುಚಿಗೊಳಿಸಲು ನೆರವಾಗುವುದು. ಮೂಸಂಬಿ ಜ್ಯೂಸ್ ನಂತೆ ಕಿತ್ತಳೆಯಲ್ಲಿ ಕೂಡ ವಿಟಮಿನ್ ಸಿ ಇದೆ. ಇದರಲ್ಲಿ ಉನ್ನತ ಮಟ್ಟದ ನಾರಿನಾಂಶವಿದ್ದು, ಇದು ದೇಹದಲ್ಲಿ ರಕ್ತಹೀನತೆ ನಿವಾರಣೆ ಮಾಡಲು ಸಹಕಾರಿ ಆಗಿರುವುದು.

Exit mobile version