Site icon Kannada News-suddikshana

ದಾವಣಗೆರೆ, ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ಅರ್ಜಿ ಹಾಕಿ; ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ಶಿವಮೊಗ್ಗ ಮತ್ತು ದಾವಣಗೆರೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಶಿವಮೊಗ್ಗದಲ್ಲಿ ಅಪ್ರೆಂಟಿಶಿಪ್ ಕ್ಯಾಂಪಸ್ ಮೇಳ ಆಯೋಜನೆ ಮಾಡಲಾಗಿದೆ ಮತ್ತು ದಾವಣಗೆರೆಯಲ್ಲಿ ಶಿಕ್ಷಕ ಹುದ್ದೆಗೆ ಆಸಕ್ತರಿಂದ ಅರ್ಜಿಗಳನ್ನು ಕರೆಯಲಾಗಿದೆ.

ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಟೊಯೋಟಾ ಕಿರ್ಲೊಸ್ಕರ್ ಪ್ರೈ.ಲಿ. ಬಿಡದಿ ಮೇ 17 ಮತ್ತು 18ರಂದು ವಿವಿಧ ವೃತ್ತಿಗಳಾದ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಎಂ.ಎಂ.ಎ., ಡಿ.ಎಂ., ಟಿ.ಡಿ.ಎಮ್., ವೆಲ್ಡರ್, ಇ.ಎಂ. ಮತ್ತು ಮೆಶಿನಿಸ್ಟ್ ವೃತ್ತಿಗಳಿಗೆ ಅಪ್ರೆಂಟಿಶಿಪ್ ಮೇಳವನ್ನು ಆಯೋಜನೆ ಮಾಡಿದ್ದಾರೆ.
ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 25 ವರ್ಷಗಳು. ಅಪ್ರೆಂಟಿಶಿಪ್ ಕ್ಯಾಂಪಸ್ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಎಸ್.ಎಸ್.ಎಲ್.ಸಿ/ ಐಟಿಐ ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಪ್ರತಿ ಹಾಗೂ ಪಾಸ್‍ಪೋರ್ಟ್ ಸೈಜ್ ಪೋಟೋಗಳೊಂದಿಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ: ದಾವಣಗೆರೆ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿನ ಚಿಣ್ಣರ ಅಂಗಳ ಶಾಲೆಗೆ ಶಿಕ್ಷಕರ ಹುದ್ದೆಗೆ ಮೇ18ರಂದು ನಗರದ ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) ನಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

ಅರ್ಜಿದಾರರು ಎನ್‍ಟಿಟಿ, ಮೌಂಟೆಸ್ಸರಿ ತರಬೇತಿಯೊಂದಿಗೆ ಎರಡು ವರ್ಷದ ಅನುಭವನ್ನು ಹೊಂದಿರಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9743936234,7899049373, 8971713916 ಅನ್ನು ಸಂಪರ್ಕಿಸಲು ತಿಳಿಸಿದೆ. ತರಬೇತಿಗೆ ಅರ್ಜಿ ಹಾಕಿ: ಶಿವಮೊಗ್ಗ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2024-25ನೇ ಸಾಲಿಗೆ ವಿಶೇಷ ವಿಕಲಚೇತನ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಅಥವಾ ಬೇರೆ ಕಡೆ ಹೋಗಿ ಉದ್ಯೋಗ ಮಾಡಲು ನೆರವಾಗುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.

ಈ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದೊಳಗಿನ ಆಸಕ್ತ ವಿಕಲಚೇತನರಾಗಿರಬೇಕು. ಕಂಪ್ಯೂಟರ್ ತರಬೇತಿ, ಮೊಬೈಲ್ ರಿಪೇರಿ, ತೋಟಗಾರಿಕೆ, ನರ್ಸರಿ, ಬಿಸಿನೆಸ್ ಪ್ರೋಸೆಸ್ ಔಟ್‍ಸೋರ್ಸಿಂಗ್, ಬ್ಯೂಟೀಷಿಯನ್, ಟೈಲರಿಂಗ್, ಹೈನುಗಾರಿಕೆ, ಹೋಂ ನರ್ಸಿಂಗ್ ಹಾಗೂ ಹೋಂ ಅಪ್ಲೈಯನ್ಸ್‌ಸ್ ರಿಪೇರ್‌ ತರಬೇತಿಯನ್ನು ನೀಡಲಾಗುತ್ತದೆ. ಒಬ್ಬ ಅಭ್ಯರ್ಥಿ 2 ವಿಷಯಗಳನ್ನು ಮಾತ್ರ ಅಯ್ಕೆ ಮಾಡಿಕೊಳ್ಳುಬೇಕು. ತರಬೇತಿ ಅವಧಿಯಲ್ಲಿ ಊಟ, ವಸತಿಯನ್ನು ಉಚಿತವಾಗಿ ನೀಡಲಾಗುವುದು. ಆಸಕ್ತಿ ಹೊಂದಿರುವ ನಿರುದ್ಯೋಗಿ ವಿಕಲಚೇತನರು ನಿಗದಿತ ನಮೂನೆ ಅರ್ಜಿಯನ್ನು ಆಯಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಅವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಮೇ 20 ರೊಳಗಾಗಿ ಸಲ್ಲಿಸಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕುಗಳ ಎಂ.ಆರ್.ಡಬ್ಲ್ಯೂಗಳನ್ನು ಸಂಪರ್ಕಿಸಬಹುದು ಅಥವ ಇಲಾಖೆ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಕರೆ ಮಾಡಲು ದೂರವಾಣಿ ಸಂಖ್ಯೆ 9449396308/ 08182-295234/ 251676.

 

Exit mobile version