SUDDIKSHANA KANNADA NEWS/DAVANAGERE/DATE:25_11_2025
ದಾವಣಗೆರೆ: ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿವಿಧ ಕಂಪನಿಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಇಂಜಿನಿಯರಿಂಗ್ ನ ವಿವಿಧ ವಿಭಾಗಗಳ ಒಟ್ಟು 70 ವಿದ್ಯಾರ್ಥಿಗಳು ಉದ್ಯೋಗ ಅವಕಾಶವನ್ನು ಪಡೆದಿದ್ದಾರೆ ಎಂದು ಜಿಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ.ಬಿ. ಅವರು ತಿಳಿಸಿದ್ದಾರೆ.
READ ALSO THIS STORY: ಇಬ್ಬರು ಪಿಎಸ್ಐ ಸೇರಿದಂತೆ 7 ಆರೋಪಿತರ ಸೆರೆ, ದಾವಣಗೆರೆ ಪೊಲೀಸರ ಭಾಗಿ ಇಲ್ಲ: ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ!
ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಶನ್ ಸೈನ್ಸ್, ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಅಂಡ್ ಮಷೀನ್ ಲರ್ನಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗಗಳ 13 ವಿದ್ಯಾರ್ಥಿಗಳು ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ. ಅಲ್ಲದೇ, 38 ವಿದ್ಯಾರ್ಥಿಗಳು ಎಸ್‌ಎಲ್‌ಕೆ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.
ಅದೇ ರೀತಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಪಾರಾಸ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಗೆ ಮತ್ತು ಬಯೋಟೆಕ್ನಾಲಜಿ ವಿಭಾಗದಿಂದ ಒಮೆಗಾ ಹೆಲ್ತ್ ಕೇರ್ ಕಂಪನಿಗೆ ಹಾಗೂ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ವಿಜಯ್ ಸ್ಪೈರಡಲ್ಸ್ ಮತ್ತು ಜಾನ್ಸನ್ ಲಿಫ್ಟ್ಸ್ ಅಂಡ್ ಎಲಿವೆಟರ್ಸ್ ಕಂಪನಿಗೆ ಆಯ್ಕೆಯಾಗಿದ್ದಾರೆ.
ಇನ್ನಷ್ಟು ಕಂಪನಿಗಳು ನೇಮಕಾತಿಗಾಗಿ ಬರುವ ನಿರೀಕ್ಷೆಯಿದ್ದು, ಕೆಲ ಕಂಪನಿಗಳು ಸಂದರ್ಶನಗಳನ್ನು ನಡೆಸಿದ್ದು, ಫಲಿತಾಂಶ ಇನ್ನೂ ಬರುವಂತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ 2025-2026 ರಲ್ಲಿ ಒಟ್ಟು 400ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದಾರೆ. ಇನ್ನೂ ಹಲವು ಪ್ರತಿಷ್ಠಿತಕಂಪನಿಗಳ ಸಂದರ್ಶನ ಪ್ರಕ್ರಿಯೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ತರಬೇತಿ ಮತ್ತು ಸಹಕಾರ ನೀಡುವ ಜವಾಬ್ದಾರಿ ಹೊಂದಿದ್ದೇವೆ. ಹಾಗೂ ಪ್ರಸ್ತುತ ಆರ್ಥಿಕ ಹಿಂಜರಿತದಿಂದ ಎದುರಾಗಿರುವ ಆರ್ಥಿಕ ಸವಾಲುಗಳ ಹೊರತಾಗಿಯೂ ನಮ್ಮ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳನ್ನು ಕೊಡಿಸುವಲ್ಲಿ ಗಮನಾರ್ಹ ಯಶಸ್ಸನ್ನು ಕಂಡಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರು ಅಕ್ಷರ ಪಿ ಹಾಗೂ ವಿಲಾಸ್ ವಾಟ್ವೆ ಮತ್ತು ಸಹಾಯಕ ಮುಖ್ಯಸ್ಥರುಗಳಾದ ಆಕಾಶ್ ಗೌಡ, ಸುನಿಲ್ ಕುಮಾರ್ ಎಂ ಸಿ ಮತ್ತು ಅವಿನಾಶ್ ಅಶ್ವಿಕ್ ತಿಳಿಸಿದ್ದಾರೆ
ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಜಿ.ಎಂ.ಯು ಕುಲಾಧಿಪತಿಗಳಾದ ಶ್ರೀ ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿಗಳಾದ ಶ್ರೀ ವೈ ಯು ಸುಭಾಷ್ಚಂದ್ರ, ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್, ಉಪ ಕುಲಪತಿಗಳಾದ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ.ಸುನಿಲ್ ಕುಮಾರ್ ಬಿ ಎಸ್ ಮತ್ತು ವಿವಿಧ ವಿಭಾಗದ ಮುಖ್ಯಸ್ಥರುಗಳು, ವಿಭಾಗದ ಸಂಯೋಜಕರುಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.






Leave a comment