Site icon Kannada News-suddikshana

ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ PDO ಹುದ್ದೆಗಳಿಗೆ ಅರ್ಜಿ ಅಹ್ವಾನ

ಸರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿರುವವರಿಗೆ ಸರ್ಕಾರದಿಂದ ಮತ್ತೊಮ್ಮೆ ಗುಡ್ ನ್ಯೂಸ್ ಸಿಕ್ಕಿದೆ, ಹೌದು ಕರ್ನಾಟಕ ಸ್ಟೇಟ್ ರೂರಲ್ ಡೆವಲಪ್ಮೆಂಟ್ ಪಂಚಾಯತ್ ರಾಜ್ ಇಲಾಖೆಯು PDO ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲು ಮುಂದಾಗಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

ಹುದ್ದೆಗಳ ಹೆಸರು: PDO ಅಧಿಕಾರಿಗಳು

ಕೆಲಸದ ಸ್ಥಳ: ಕರ್ನಾಟಕದಲ್ಲಿ

ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ

ಹುದ್ದೆಗಳ ಸಂಖ್ಯೆ: 247

ವಿದ್ಯಾರ್ಹತೆ: ಪದವಿ ವಿದ್ಯಾರ್ಹತೆ ಹೊಂದಿರಬೇಕು.

ಸಂಬಳ: ರೂ. 37,900 ರಿಂದ ರೂ. 70,850

ವಯಸ್ಸಿನ ಮಿತಿ: ಕೊನೆಯ ಅರ್ಜಿಯ ಸಮಯದಲ್ಲಿ ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – 35 ವರ್ಷಗಳು ಮತ್ತು 38 ವರ್ಷಗಳವರೆಗೆ.

2A, 2B, 3A, 3B ವರ್ಗಗಳ ಅಭ್ಯರ್ಥಿಗಳಿಗೆ – 41 ವರ್ಷಗಳವರೆಗೆ

.ಪ.ಜಾತಿ, ಪ.ಪಂ., ವರ್ಗ 1 ಅಭ್ಯರ್ಥಿಗಳಿಗೆ – 43 ವರ್ಷಗಳು.

ಈ ಹುದ್ದೆಗೆ ಅರ್ಜಿ ಶುಲ್ಕ ಎಷ್ಟಿರುತ್ತೆ?

ಅಗತ್ಯವಿರುವ ನೋಂದಣಿ ಶುಲ್ಕದ ವಿವರಗಳು:

ಸಾಮಾನ್ಯ ಅಭ್ಯರ್ಥಿಗಳು – ರೂ.600

ವರ್ಗ 2A, 2B, 3A, 3B ಅಭ್ಯರ್ಥಿಗಳು – ರೂ.300

ಮಾಜಿ ಸೈನಿಕ ಅಭ್ಯರ್ಥಿಗಳು – 50 ರೂಪಾಯಿಗಳು

ಪ.ಜಾತಿ, ಪ.ಪಂ., ಪ್ರವರ್ಗ 1, ವಿಕಲಚೇತನ ಅಭ್ಯರ್ಥಿಗಳಿಗೆ ಉಚಿತ.

ಹುದ್ದೆಗಳ ಸಂಖ್ಯೆ

ಪಂಚಾಯತ್ ಅಭಿವೃದ್ಧಿ ಅಧಿಕಾರಿ (HK) : 97

ಪಂಚಾಯತ್ ಅಭಿವೃದ್ಧಿ ಅಧಿಕಾರಿ (RPC) : 150

ಒಟ್ಟು ಹುದ್ದೆಗಳು: 247

ಆಯ್ಕೆ ವಿಧಾನ: ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ

ಈ ಹುದ್ದೆಗಳ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 15- ಏಪ್ರಿಲ್ -2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15- ಮೇ -2024 [03- ಅಕ್ಟೋಬರ್ -2024]

ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

ಅಧಿಕೃತ ವೆಬ್‌ಸೈಟ್: rdpr.karnataka.gov.in

Exit mobile version