Site icon Kannada News-suddikshana

ಉತ್ತರ ರೈಲ್ವೆ ವಲಯದಲ್ಲಿ ಉದ್ಯೋಗಾವಕಾಶ : ಖಾಲಿ ಇರುವ 4,096 ಹುದ್ದೆಗಳ ನೇಮಕಾತಿ; ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(Railway Department) ಉತ್ತರ ರೈಲ್ವೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಕೆ ಹೇಗೆ? ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ? ವೇತನ, ವಯೋಮಿತಿ, ಹುದ್ದೆಯ ಸಂಖ್ಯೆ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

ನೇಮಕಾತಿ ಪ್ರಾಧಿಕಾರ:
ಉತ್ತರ ರೈಲ್ವೆ, ರೈಲ್ವೆ ನೇಮಕಾತಿ ಮಂಡಳಿ

ಹುದ್ದೆ ಹೆಸರು:
ಆಕ್ಟ್ ಅಪ್ರೆಂಟಿಸ್

ಹುದ್ದೆಗಳ ಸಂಖ್ಯೆ:
4,096

ಅಪ್ರೆಂಟಿಸ್ ಹುದ್ದೆ ಅವಧಿ
01 ವರ್ಷ

ಹುದ್ದೆಗಳ ಸಂಖ್ಯೆ:
ಲಕ್ನೊ ಕ್ಲಸ್ಟರ್: 1,397
ಅಂಬಾಲ ಕ್ಲಸ್ಟರ್: 914
ಮೊರದಾಬಾದ್ ಕ್ಲಸ್ಟರ್: 16
ದೆಹಲಿ ಕ್ಲಸ್ಟರ್: 1,137
ಫಿರೋಜ್‌ಪುರ್ ಕ್ಲಸ್ಟರ್: 632

ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ/ಐಟಿಐ ಪಾಸ್ ಆಗಿರಬೇಕು.

ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ವೇತನ:
ಈ ಹುದ್ದೆಗೆ  8,000 ದಿಂದ 10,000

ಅರ್ಜಿ ಶುಲ್ಕ:
ಈ ಹುದ್ದೆಗೆ  100/- ಅರ್ಜಿ ಶುಲ್ಕ ( ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆರ್ಥಿಕವಾಗಿ ಹಿಂದುಳಿದವರು/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.)

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://www.rrcnr.org/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಉತ್ತರ ರೈಲ್ವೆಯ ಅಧಿಕೃತ ( website link) ವೆಬ್‌ಸೈಟ್‌ https://www.rrcnr.org/ ಗೆ ಭೇಟಿ ನೀಡಿ.
ಉತ್ತರ ರೈಲ್ವೆಯ ವೆಬ್‌ನ ( web page) ಮುಖಪುಟದಲ್ಲಿ ‘Recruitment/Career’ ಎಂಬಲ್ಲಿ ಕ್ಲಿಕ್ (click) ಮಾಡಿ.
ಮತ್ತೊಂದು ಹೊಸ ವೆಬ್‌ಪೇಜ್‌ ತೆರೆಯುತ್ತದೆ.
ಇಲ್ಲಿ ರಿಜಿಸ್ಟ್ರೇಷನ್‌ ಪಡೆದು, ಲಾಗಿನ್‌ (login) ಆಗಿ.
ಕೇಳಲಾದ ವೈಯಕ್ತಿಕ, ವಿದ್ಯಾರ್ಹತೆ, ಇತರೆ ಮಾಹಿತಿಗಳನ್ನು ನೀಡಿ ಅರ್ಜಿ ( application) ಸಲ್ಲಿಸಿ.
ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ (Print) ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :
16-08-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
16-09-2024 ರ ರಾತ್ರಿ 11-59 ಗಂಟೆವರೆಗೆ

 

Exit mobile version