Site icon Kannada News-suddikshana

ತಾತ್ಕಾಲಿಕ ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

SUDDIKSHANA KANNADA NEWS/ DAVANAGERE/ DATE:04-09-2024

ದಾವಣಗೆರೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾವತಿಯಿಂದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಂಗ್ಲ ಮಾಧ್ಯಮದಲ್ಲಿ ಭೋದಿಸಲು ಆಸಕ್ತಿಯುಳ್ಳ ಹಾಗೂ ಅರ್ಹ ಅಭ್ಯರ್ಥಿಗಳು ಸೆ.10 ರೊಳಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಹಾಗೂ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ಪದವಿ ಪೂರ್ವಕಾಲೇಜು, ಕೆರೆಬಿಳಚಿ ಗ್ರಾಮ ಇಲ್ಲಿ ಸಲ್ಲಿಸಬಹದು.

ಕನ್ನಡ ಶಿಕ್ಷಕರು, ಇಂಗ್ಲೀಷ್ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎ, ಬಿ.ಎಡ್, ಗಣಿತ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎಸ್ಸಿ, ಬಿ.ಎಡ್, ಸಾಮಾನ್ಯ ವಿಜ್ಞಾನ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎಸ್ಸಿ, ಬಿ.ಎಡ್, ಸಮಾಜ ವಿಜ್ಞಾನ ಶಿಕ್ಷಕರು ಹುದ್ದೆ ಸಂಖ್ಯೆ-1, ವಿದ್ಯಾರ್ಹತೆ ಬಿ.ಎ, ಬಿ.ಎಡ್ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ : 08192-250022, 9483075634 ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

Exit mobile version