SUDDIKSHANA KANNADA NEWS/DAVANAGERE/DATE:30_10_2025
ಶಿವಮೊಗ್ಗ: ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ಒಂದು ವರ್ಷದ ಕರಾರಿನ ಆಧಾರದ ಮೇಲೆ ಖಾಲಿ ಇರುವ ಒಂದು ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
READ ALSO THIS STORY: 3 ವರ್ಷವಾದ್ರೂ ಇಲ್ಲೇ ಠಿಕಾಣಿ ಹೂಡಿರೋ ಪಾಲಿಕೆ ಆಯುಕ್ತೆಯಿಂದ ಸಚಿವ, ಸಂಸದೆಗೆ ಕೆಟ್ಟ ಹೆಸರು: ಮಾದಿಗ ದಂಡೋರ ಸಮಿತಿ ಗಂಭೀರ ಆರೋಪ!
ಅರ್ಜಿ ಸಲ್ಲಿಸುವರು ಬಿ.ಕಾಂ ಪದವಿ ಹೊಂದಿರಬೇಕು. ಲೆಕ್ಕಪತ್ರಗಳನ್ನು ನಿರ್ವಹಿಸುವ ಕುರಿತು ಕನಿಷ್ಟ 5 ವರ್ಷಗಳ ಅನುಭವ, ಕನ್ನಡ ಮತ್ತು ಇಂಗ್ಲೀಷ್ ಮಾತನಾಡು ಹಗೂ ಬರೆಯುವಲ್ಲಿ ಉತ್ತಮ ಕೌಶಲ್ಯ, ಕಂಪ್ಯೂಟರ್ ಜ್ಞಾನ, ಟ್ಯಾಲಿ ಸಾಫ್ಟ್ವೇರ್ ಉಪಯೋಗಿಸುವ ಜ್ಞಾನ ಮತ್ತು ಕೌಶಲ್ಯ ಹಾಗೂ ಕಚೇರಿ ಪತ್ರ ವ್ಯವಹಾರಗಳು ಹಾಗೂ ಲೆಕ್ಕ ಪತ್ರ ವ್ಯವಹಾರಗಳನ್ನು ಗಣಕೀಕೃತದಲ್ಲಿ ನಮೂದಿಸಿ ಕೇಂದ್ರ ಕಚೇರಿ ಗಣಕಯಂತ್ರದ ಮೂಲಕ ಕಳುಹಿಸುವ ಕುರಿತು ಪರಿಣಿತಿ ಹೊಂದಿರಬೇಕು. ಈ ಹುದ್ದೆಗೆ 21,909 ರೂ. ಗೌರವಧನ ನೀಡಲಾಗುವುದು.
ಯಾವುದೇ ಸರ್ಕಾರಿ ಕೆಲಸದಿಂದ ವಜಾಗೊಂಡಿರುವ ಹಾಗೂ ನಿವೃತ್ತಿ ಹೊಂದಿರುವ ಮತ್ತು ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸುವಂತಿಲ್ಲ.
ಅರ್ಹ ಅಭ್ಯರ್ಥಿಗಳು ಅದಕ್ಕೆ ಸ್ವವಿವರ, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರದೊಂದಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ ಶಿವಮೊಗ್ಗ ಇವರ ಹೆಸರಿಗೆ ಬಿಳಿ ಹಾಳೆಯಲ್ಲಿ ಅರ್ಜಿ ಬರೆದು, ಕಾರ್ಮಿಕ ಅಧಿಕಾರಿ/ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಚೇರಿ, 2 ನೇ ಮಹಡಿ ವಾಣಿಜ್ಯ ಸಂಕೀರ್ಣ (ಸೂಡ) ಕಾಂಪ್ಲೇಕ್ಸ್, ಪೊಲೀಸ್ ಚೌಕಿ ವಿನೋಬ ನಗರ ಇಲ್ಲಿಗೆ ನ.10 ರೊಳಗಾಗಿ ಸಲ್ಲಿಸುವಂತೆ ಕಾರ್ಮಿಕ ಅಧಿಕಾರಿ ವೇಣುಗೋಪಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


