Site icon Kannada News-suddikshana

ಅಂಚೆ ಇಲಾಖೆಯಿಂದ ಬೃಹತ್‌ ನೇಮಕಾತಿ: ದೇಶಾದ್ಯಂತ 44,228 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತೀಯ ಅಂಚೆ ಇಲಾಖೆ (India Post Office) ಬಹುನಿರೀಕ್ಷಿತ ಗ್ರಾಮೀಣ ಡಾಕ್ ಸೇವಕ್‌ (Gramin Dak Sevak) ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ದೇಶಾದ್ಯಂತ ಸುಮಾರು 44,228 ಹುದ್ದೆಗಳು ಖಾಲಿ ಇವೆ. ಈ ಪೈಕಿ ನಮ್ಮ ರಾಜ್ಯದಲ್ಲಿ 1,940 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ (Karnataka Postal Circle Recruitment 2024). ಗ್ರಾಮೀಣ ಡಾಕ್‌ ಸೇವಕ್‌ (ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ಮತ್ತು ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌) ಹುದ್ದೆಗಳಿಗೆ 10ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನ ಕೊನೆಯ ದಿನ ಆಗಸ್ಟ್‌ 5.

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

ಬಾಗಲಕೋಟೆ 23, ಬಳ್ಳಾರಿ 50, ಬೆಂಗಳೂರು ಜಿಪಿಒ 4, ಬೆಳಗಾವಿ 33, ಬೆಂಗಳೂರು ಪೂರ್ವ 83, ಬೆಂಗಳೂರು ದಕ್ಷಿಣ 62, ಬೆಂಗಳೂರು ಪಶ್ಚಿಮ 39, ಬೀದರ್ 59, ಚನ್ನಪಟ್ಟಣ 87, ಚಿಕ್ಕಮಗಳೂರು 60, ಚಿಕ್ಕೋಡಿ 19, ಚಿತ್ರದುರ್ಗ 27, ದಾವಣಗೆರೆ ಕಚೇರಿ 40, ಧಾರವಾಡ 22, ಗದಗ 18, ಗೋಕಾಕ್ 7, ಹಾಸನ 78, ಹಾವೇರಿ 44, ಕಲಬುರಗಿ 83, ಕಾರವಾರ 43, ಕೊಡಗು 76, ಕೋಲಾರ 106, ಕೊಪ್ಪಳ 36, ಮಂಡ್ಯ 65, ಮಂಗಳೂರು 62, ಮೈಸೂರು 42, ನಂಜನಗೂಡು 66, ಪುತ್ತೂರು 89, ರಾಯಚೂರು 63, ಆರ್‌ಎಂಎಸ್‌ ಎಚ್‌ಬಿ 3, ಆರ್‌ಎಂಎಸ್‌ ಕ್ಯೂ 9, ಶಿವಮೊಗ್ಗ 89, ಶಿರಸಿ 66, ತುಮಕೂರು 107, ಉಡುಪಿ 90, ವಿಜಯಪುರ 40, ಯಾದಗಿರಿ 50 ಹುದ್ದೆಗಳಿವೆ.

ವಿದ್ಯಾರ್ಹತೆ ಮತ್ತು ವಯೋಮಿತಿ

ಭಾರತದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ (ಇಂಗ್ಲಿಷ್‌ ಮತ್ತು ಗಣಿತ ವಿಷಯ ಒಳಗೊಂಡಿರುವುದು ಕಡ್ಡಾಯ) ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ ವಿಭಾಗದ ಅಭ್ಯರ್ಥಿಗಳು 100 ರೂ. ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಅಂಗವಿಕಲ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌-12,000 ರೂ. -29,380 ರೂ., ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌-10,000 ರೂ. – 24,470 ರೂ. ಮಾಸಿಕ ವೇತನ ಇದೆ.

ಅರ್ಜಿ ಸಲ್ಲಿಸುವ ವಿಧಾನ

Exit mobile version