Home ದಾವಣಗೆರೆ ದಾವಣಗೆರೆ ದಕ್ಷಿಣ ಉಪಚುನಾವಣೆ – ಜೆಡಿಎಸ್‌ಗೆ ಬಿಗ್ ಶಾಕ್: ಸಚಿವ ಎಸ್‌ಎಸ್‌ಎಂ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ಪ್ರಮುಖ ಮುಖಂಡರು!
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಉಪಚುನಾವಣೆ – ಜೆಡಿಎಸ್‌ಗೆ ಬಿಗ್ ಶಾಕ್: ಸಚಿವ ಎಸ್‌ಎಸ್‌ಎಂ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಜೆಡಿಎಸ್ ಪ್ರಮುಖ ಮುಖಂಡರು!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ನಗರದಲ್ಲಿನ ಕಲ್ಲೇಶ್ವರ ರೈಸ್ ಮಿಲ್ ಆವರಣಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಮತ್ತು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಜೆಡಿಎಸ್ ಪಕ್ಷದ ಮುಖಂಡರಾದ ಜೆ.ಅಮಾನುಲ್ಲಾ ಖಾನ್ ಅವರ ಆಪ್ತರಾದ ಇಮ್ತಿಯಾಜ್, ಸೈ ಹುಸೇನ್, ಹುಸೇನ್, ಜಮೀರ್, ಟೈಲರ್ ಹೆಸನ್ ಅವರಿಗೆ ಸಚಿವರು ಕಾಂಗ್ರೆಸ್ ಪಕ್ಷದ ಶಾಲನ್ನು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಲ ತರುವ ಪ್ರಯತ್ನ ಪ್ರಮಾಣಿಕವಾಗಿ ಎಲ್ಲರು ಮಾಡೋಣ ಎಂದರು.

ಈ ಸಂದರ್ಭದಲ್ಲಿ ಮಾಯಕೊಂಡದ ಶಾಸಕ ಕೆ.ಸ್ ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಅಧಕ್ಷ ಹೆಚ್.ಬಿ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ದಕ್ಷಿಣ ಬ್ಲಾಕ್ ಅಧ್ಯಕ್ಷ ಅಯ್ಯೂಬ್ ಪೈಲ್ವಾನ್, ಬಿ.ಹೆಚ್. ವೀರಭದ್ರಪ್ಪ, ತುರ್ಚಘಟ್ಟ ಬಸವರಾಜಪ್ಪ, ಮಾಜಿ ಮೇಯರ್ ಗೋಣೆಪ್ಪ, ಕೆ.ಚಮನ್ ಸಾಬ್, ಡಿ.ಬಸವರಾಜ್, ಎ.ಬಿ ರಹೀಂ, ಅನೀತಬಾಯಿ ಮಾಲತೇಶ್ ಜಾಧವ್, ವಿನಾಯಕ ಪೈಲ್ವಾನ್, ವಾಣಿ ಬಕ್ಕೇಶ್, ನೀಲಗಿರಿಯಪ್ಪ, ಕುಕ್ಕುವಾಡ ಮಲ್ಲೇಶಪ್ಪ, ಕುಕ್ಕುವಾಡ ಮಂಜುನಾಥ್, ಮಾಗನಹಳ್ಳಿ ಪರಶುರಾಮ್, ಏ ನಾಗರಾಜ್, ಗಡಿಗುಡಾಳ್ ಮಂಜುನಾಥ್, ಜಾಕೀರ್, ಶಫೀಕ್ ಪಂಡಿತ್, ಅಲ್ತಾಫ್ ಹುಸೇನ್, ಕೆ.ಜಿ.ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *