Site icon Kannada News-suddikshana

ಜಮ್ಮು ಮತ್ತು ಕಾಶ್ಮೀ ರದಲ್ಲಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀ ರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಗುರುವಾರ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಭಾರತೀಯ ಭದ್ರತಾ ಪಡೆ ಕಾರ್ಯಾಚರಣೆ ನಡೆಸುತ್ತಿರುವ ವೇಳೆ ಇಬ್ಬರು ದುಷ್ಕರ್ಮಿಗಳು ತಂಗ್ಧರ್ ಸೆಕ್ಟರ್ನ ಗಡಿ ಪ್ರದೇಶದಲ್ಲಿ ಒಳ ನುಸುಳುತ್ತಿರುವುದು ಕಂಡುಬಂದ ಹಿನ್ನಲೆ ಎಚ್ಚರಿಕೆ ನೀಡಿದರು , ಭದ್ರತಾ ಪಡೆಯನ್ನು ಲೆಕ್ಕಿಸದೆ ನುಸುಳಲು ಯತ್ನಿಸಿದ್ದಾರೆ ಈ ವೇಳೆ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಗುಪ್ತಚರ ಮಾಹಿತಿಯ ಪ್ರಕಾರ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಮ್ರೋಹಿ, ತಂಗ್ಧರ್ನಲ್ಲಿ ಗುಪ್ತಚರ ಮಾಹಿತಿ ಪಡೆದು ಜಂಟಿ ಶೋಧ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಎರಡು ಪಿಸ್ತೂಲ್ ಸೇರಿದಂತೆ ಸ್ಫೋ ಟಕ ಸಾಮಗ್ರಿಗಳನ್ನುತಂಡ ವಶಕ್ಕೆ ಪಡೆದುಕೊಂಡಿದೆ. ಭದ್ರತಾ ಪಡೆ ಗಡಿ ಭಾಗದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದೆ.

 

 

 

Exit mobile version