ವಾಷಿಂಗ್ಟನ್/ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯು “ಅಂತ್ಯವಿಲ್ಲದ ಯುದ್ಧ” (Endless War) ಆಗುವುದಿಲ್ಲ, ಬದಲಿಗೆ ಇದು ಶೀಘ್ರ ಮತ್ತು ನಿರ್ಣಾಯಕ ಕಾರ್ಯಾಚರಣೆಯಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇರಾನ್ ತನ್ನ ಪರಮಾಣು ಕೇಂದ್ರಗಳನ್ನು ಭೂಗತ ಬಂಕರ್‌ಗಳಲ್ಲಿ ನಿರ್ಮಿಸುತ್ತಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಅವುಗಳ ಮೇಲೆ ದಾಳಿ ಮಾಡುವುದು ಅಸಾಧ್ಯವಾಗುತ್ತಿತ್ತು. ಹಾಗಾಗಿ, ಈಗಿನ ದಾಳಿ ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಮುಖ ಅಂಶಗಳು:
ನಿರ್ಣಾಯಕ ಕ್ರಮ:
ಈ ಯುದ್ಧವು ವರ್ಷಗಳ ಕಾಲ ಮುಂದುವರಿಯುವುದಿಲ್ಲ, ಆದರೆ ಗುರಿ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಪರಮಾಣು ಭೀತಿ:
ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಪರಮಾಣು ಬಾಂಬ್ ಯೋಜನೆಗಳು ಸುರಕ್ಷಿತ ನೆಲೆ ಸೇರುವ ಮುನ್ನವೇ ಅವುಗಳನ್ನು ಧ್ವಂಸಗೊಳಿಸುವುದು ಇಸ್ರೇಲ್ ಮತ್ತು ಅಮೆರಿಕದ ಗುರಿಯಾಗಿದೆ.
ಟ್ರಂಪ್ ಅಂದಾಜು:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಸಂಘರ್ಷವು ಸುಮಾರು ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ನಡೆಯಬಹುದು ಎಂದು ಅಂದಾಜಿಸಿದ್ದಾರೆ.





Leave a comment