ದಾವಣಗೆರೆ: ಮಾಧ್ಯಮವದರಿಗೆ ನಮ್ಮ ಸಿಎಂ ಸಾಹೇಬ್ರು ಸಿದ್ದರಾಮಯ್ಯರ ಮೇಲೆ ದ್ವೇಷ ಇದೆ ಎನಿಸುತ್ತದೆ. ನಿಮಗೆ ಯಾಕೆ ಇಷ್ಟೊಂದು ಸಿದ್ದರಾಮಯ್ಯರ ಮೇಲೆ ವಿರೋಧ ಇದೆ ಎಂಬುದು ಗೊತ್ತಾಗುತ್ತಿಲ್ಲ. ಪ್ರತಿ ಬಾರಿಯೂ ಬರುತ್ತೀರಿ. ಅದೇ ಪ್ರಶ್ನೆ ಕೇಳುತ್ತೀರಾ. ನಾವು ಸುಮ್ನೇ ಇದ್ದೇವೆ. ಮಾಧ್ಯಮದವರಿಗೆ ಸಿದ್ದರಾಮಯ್ಯರನ್ನು ಇಳಿಸಲು ಬೇರೆ ಕಡೆಯಿಂದ ಒತ್ತಡ ಇದೆಯೇ? ಎಂದು ಮಾಧ್ಯಮದವರನ್ನೇ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಪ್ರಶ್ನಿಸಿದರು.
READ ALSO THIS STORY: 1,000 ಕೋಟಿ ರೂ. ಗೂ ಅಧಿಕ ವಹಿವಾಟು ಪತ್ತೆ: ಸಿಐಡಿಗೆ ಕೇಸ್ ವರ್ಗಾಯಿಸಿದ್ಯಾಕೆ ದಾವಣಗೆರೆ ಪೊಲೀಸರು?
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರ ರಾಜ್ಯದಲ್ಲಿ ಚರ್ಚೆಯಾದಾಗ ಹೈಕಮಾಂಡ್ ಮಧ್ಯ ಪ್ರವೇಶಿಸಿತು. ಆ ಬಳಿಕ ನಾನೂ ಏನೂ ಮಾತನಾಡಿಲ್ಲ. ನನಗೆ ಟಿಕೆಟ್ ಘೋಷಣೆ ಆಗಿದಾಗಿನಿಂದ ಇಲ್ಲಿಯವರೆಗೆ ಡಿ. ಕೆ. ಶಿವಕುಮಾರ್ ಪರ ಇದ್ದೇನೆ. ಅವರು ಮುಖ್ಯಮಂತ್ರಿಯಾಗಬೇಕೆಂಬುದು ನನ್ನ ಆಸೆ. ಇದಕ್ಕೆ ಈಗಲೂ ಬದ್ಧ, ಮುಂದೆಯೂ ಇದೇ ನನ್ನ ಅಭಿಪ್ರಾಯ ಎಂದು ಹೇಳಿದರು.
ಸಿದ್ದರಾಮಯ್ಯರ ಜೊತೆ ಒಪ್ಪಂದ ಆಗಿದೆ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಹೈಕಮಾಂಡ್ ಗೂ ಈ ವಿಚಾರ ಗೊತ್ತಿದೆ. ಅಭಿವೃದ್ಧಿ ವಿಚಾರ ಸೇರಿದಂತೆ ಬೇರೆ ಬೇರೆ ವಿಚಾರಗಳಿರಬಹುದು. ಎಲ್ಲಿಯೂ ಮುಖ್ಯಮಂತ್ರಿ ಬದಲಾವಣೆ ಎಂದು ಡಿ. ಕೆ. ಶಿವಕುಮಾರ್ ಸಾಹೇಬರು ಹೇಳಿಲ್ಲ. ಇವೆಲ್ಲಾ ಮಾಧ್ಮಮಗಳ ಸೃಷ್ಟಿ ಎಂದು ಹೇಳಿದರು.
ಮಾಧ್ಯಮವದರಿಗೆ ಸಿದ್ದರಾಮಯ್ಯರ ಮೇಲೆ ದ್ವೇಷ ಇದೆ ಎನಿಸುತ್ತದೆ. ನಿಮಗೆ ಯಾಕೆ ಇಷ್ಟೊಂದು ಸಿದ್ದರಾಮಯ್ಯರ ಮೇಲೆ ವಿರೋಧ ಇದೆ ಎಂಬುದು ಗೊತ್ತಾಗುತ್ತಿಲ್ಲ. ಪ್ರತಿ ಬಾರಿಯೂ ಬರುತ್ತೀರಿ. ಅದೇ ಪ್ರಶ್ನೆ ಕೇಳುತ್ತೀರಾ. ನಾವು ಸುಮ್ನೇ ಇದ್ದೇವೆ. ಮಾಧ್ಯಮದವರಿಗೆ ಸಿದ್ದರಾಮಯ್ಯರನ್ನು ಇಳಿಸಲು ಬೇರೆ ಕಡೆಯಿಂದ ಒತ್ತಡ ಇದೆಯೇ? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ನಿಮಗ್ಯಾಕೆ ಸಿದ್ದರಾಮಯ್ಯರ ಮೇಲೆ ಇಷ್ಟೊಂದು ದ್ವೇಷ, ಕೋಪ. ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ ಬಳಿಕ ಸುಮ್ಮನಾಗಿದ್ದೇವೆ. ಆಂಜನೇಯ ಆಗಿದ್ದರೆ ರಾಮನನ್ನು ಎದೆ ಸೀಳಿ ತೋರಿಸುತ್ತಿದ್ದರು. ನಾವು ಮನುಷ್ಯರು. ನಾವು ಹೇಳಬಹುದು ಅಷ್ಟೇ ಎಂದು ಹೇಳಿದರು.
- Basavaraju V. Shivaganga
- Basavaraju V. Shivaganga Congress Mla
- Basavaraju V. Shivaganga News
- Basavaraju V. Shivaganga Talk
- Mla
- ಚನ್ನಗಿರಿ ಕಾಂಗ್ರೆಸ್ ಶಾಸಕ
- ಬಸವರಾಜ್ ವಿ. ಶಿವಗಂಗಾ
- ಬಸವರಾಜ್ ವಿ. ಶಿವಗಂಗಾ ಗರಂ
- ಬಸವರಾಜ್ ವಿ. ಶಿವಗಂಗಾ ನ್ಯೂಸ್
- ಬಸವರಾಜ್ ವಿ. ಶಿವಗಂಗಾ ಮಾತು
- ಬಸವರಾಜ್ ವಿ. ಶಿವಗಂಗಾ ಸಿಟ್ಟು
- ಬಸವರಾಜ್ ವಿ. ಶಿವಗಂಗಾ- ಚನ್ನಗಿರಿ ಕಾಂಗ್ರೆಸ್ ಶಾಸಕ





Leave a comment