Home ನವದೆಹಲಿ ಹೆಸರಿಗಷ್ಟೇ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷರಾ? ಅಧಿಕಾರ ನಕಲಿ ಗಾಂಧಿ ಕುಟುಂಬಕ್ಕೇಕೆ?
ನವದೆಹಲಿಬೆಂಗಳೂರು

ಹೆಸರಿಗಷ್ಟೇ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷರಾ? ಅಧಿಕಾರ ನಕಲಿ ಗಾಂಧಿ ಕುಟುಂಬಕ್ಕೇಕೆ?

Share
ಮಲ್ಲಿಕಾರ್ಜುನ್ ಖರ್ಗೆ
Share

SUDDIKSHANA KANNADA NEWS/DAVANAGERE/DATE:24_11_2025

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಂಚಿಕೆ ಬಿಕ್ಕಟ್ಟು ತಾರಕಕ್ಕೇರಿದೆ. ಡಿಸಿಎಂ ಡಿ. ಕೆ. ಶಿವಕುಮಾರ್ ಬಣ ಅಧಿಕಾರ ಹಸ್ತಾಂತರ ಆಗಲೇಬೇಕು ಎಂಬ ಪಟ್ಟು ಹಿಡಿದಿದ್ದರೆ, ಸಿಎಂ ಸಿದ್ದರಾಮಯ್ಯರ ಬಣ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂಬ ಆಗ್ರಹ ಮಾಡುತ್ತಿದೆ. ಇದು ಕಾಂಗ್ರೆಸ್ ಹೈಕಮಾಂಡ್ ತಲೆಬಿಸಿಗೆ ಕಾರಣವಾಗಿದೆ.

READ ALSO THIS STORY: ಡಿ. ಕೆ. ಶಿವಕುಮಾರ್ ಸಿಎಂ ಪಟ್ಟಕ್ಕೆ ಗಟ್ಟಿಯಾಗುತ್ತಿದೆ “ಬಂಡೆ ಬೆಂಬಲಿಗರ ಬಣ”! ದೆಹಲಿಯಲ್ಲಿ ನಡೆಯುತ್ತಿದೆ ಕಾರ್ಯತಂತ್ರದ ರಹಸ್ಯ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೂ ಅಧಿಕಾರ ಹಂಚಿಕೆ ಬಿಕ್ಕಟ್ಟು ಶಮನವಾಗಿಲ್ಲ.

ಮಲ್ಲಿಕಾರ್ಜುನ್ ಖರ್ಗೆ

ಈ ನಡುವೆ ಮಲ್ಲಿಕಾರ್ಜುನ್ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದರೂ ನನ್ನ ಕೈಯಲ್ಲಿ ಏನೂ ಇಲ್ಲ. ಏನೂ ಮಾಡಲು ಆಗಲ್ಲ. ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕ ಚರ್ಚೆ ಮಾಡಲಾಗುವುದು. ನನ್ನ ಬಳಿ ಹೇಳುವುದು ಏನೂ ಇಲ್ಲ ಎಂದಿದ್ದರು.

ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿಯು ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದೆ.

ನೀವು ಎಐಸಿಸಿ ಅಧ್ಯಕ್ಷರು ಎಂಬುದನ್ನು ಮರೆತಿದ್ದೀರಾ ಅಥವಾ ಇದು ಕೇವಲ ಹೆಸರಿಗಷ್ಟೇ ಅಧ್ಯಕ್ಷಗಿರಿಯೇ ಮಲ್ಲಿಕಾರ್ಜುನ ಖರ್ಗೆಯವರೇ? ಎಂದು ಬಿಜೆಪಿಯು ಎಕ್ಸ್ ನಲ್ಲಿ ಪ್ರಶ್ನಿಸಿದೆ.

ಹುದ್ದೆ ನಿಮ್ಮದಾದರೆ, ಅಧಿಕಾರ ನಕಲಿ ಗಾಂಧಿ ಕುಟುಂಬಕ್ಕೇಕೆ? ನೀವು ಇಂತಹ ಅಸಹಾಯಕ ಸ್ಥಿತಿಯಲ್ಲಿದ್ದೀರೇಕೆ, ಖರ್ಗೆಯವರೇ? ಇದು ಸಮಸ್ತ ಕನ್ನಡಿಗರಿಗೆ ಆಗುವ ಅವಮಾನ ಅಲ್ಲವೇ? ಎಂದು ಬಿಜೆಪಿಯು ಪ್ರಶ್ನೆಯನ್ನು ಹಾಕಿದೆ.

Share

Leave a comment

Leave a Reply

Your email address will not be published. Required fields are marked *