Site icon Kannada News-suddikshana

ಗುಜರಾತ್ ಟೈಟಾನ್ಸ್ ಗೆ ಒಲಿಯಲಿಲ್ಲ ಅದೃಷ್ಟ: 5 ನೇ ಬಾರಿ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವಕ್ಕೆ ಜೈಹೋ….

SUDDIKSHANA KANNADA NEWS/ DAVANAGERE/ DATE:30-05-2023

ನರೇಂದ್ರ ಮೋದಿ ಕ್ರೀಡಾಂಗಣ (GUJRATH): ಆಗಾಗ್ಗೆ ಸುರಿಯುತ್ತಿದ್ದ ಮಳೆ. ಅಭಿಮಾನಿಗಳಲ್ಲಿ ಪಂದ್ಯ ನಡೆಯುತ್ತೋ ಇಲ್ಲವೋ ಎಂಬ ಟೆನ್ಶನ್. ಕ್ಷಣ ಕ್ಷಣಕ್ಕೂ ಮಳೆರಾಯನ ಆಗಮನದ ಆತಂಕ. ಒಮ್ಮೆ ಮೋಡ ಕವಿದ ವಾತಾವರಣ.
ಮಗದೊಮ್ಮೆ ಕ್ರೀಡಾಂಗಣದತ್ತ ಚಿತ್ತ. ಅಂತೂ ಮಳೆಯ ಆಟದ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನ ನೀಡಿದೆ. ಮಾತ್ರವಲ್ಲ, ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ನಾಯಕ ಮಹೇಂದ್ರ ಸಿಂಗ್
ಧೋನಿ ನಾಯಕತ್ವಕ್ಕೆ ವಿಶ್ವವೇ ಮೆಚ್ಚಿಕೊಂಡಿದೆ.

ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (CSK)ವಿರುದ್ಧ ಗುಜರಾತ್ ಟೈಟಾನ್ಸ್ (GT)2023 ರ ಐಪಿಎಲ್ ಫೈನಲ್ ಪಂದ್ಯ ಆಡಬೇಕಿತ್ತು. ಮಳೆ ಬಂದ ಕಾರಣ ಸೋಮವಾರಕ್ಕೆ ಪಂದ್ಯ ಮುಂದೂಡಲಾಯಿತು. ಇನ್ನೇನೂ ಪಂದ್ಯ ಆರಂಭವಾಗುತ್ತೆ ಎನ್ನುವ ಕೆಲ ಗಂಟೆಗಳ ಹಿಂದೆ ಮಳೆ ಸುರಿಯಿತು. ಆಗ ಎರಡೂ ತಂಡಗಳಿಗೆ ಆತಂಕ ಶುರುವಾಯಿತು. ಕೋಟ್ಯಂತರ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಕಾಯುತ್ತಿದ್ದರೂ ಮಳೆರಾಯನದ್ದೇ ಆಟ ಎಂದುಕೊಂಡಿದ್ದರು. ಆದ್ರೆ, ಆಮೇಲೆ ಮಳೆರಾಯ ಬಿಡುವು ಕೊಟ್ಟ.

ಮೊದಲು ಬ್ಯಾಟಿಂಗ್ (BATTING) ಮಾಡಿದ ಗುಜರಾತ್ ಟೈಟಾನ್ಸ್ (GT) ಅತ್ಯುತ್ತಮ ಆರಂಭ ಪಡೆಯಿತು. ಕಳೆದ ಪಂದ್ಯದ ಶತಕ ವೀರ ಶುಭಮನ್ ಗಿಲ್ ಕೇವಲ 39 ರನ್ ಗಳಿಸಿ ಔಟಾದರು. ವೃದ್ಧಿಮಾನ್ ಸಾಹಾ ಬಿರುಸಿನ ಆಟವಾಡಿ 54 ರನ್ ಗಳಿಸಿ
ತಂಡದ ಮೊತ್ತ ಹೆಚ್ಚಿಸಲು ಕಾರಣರಾದರು. ಆ ನಂತರ ಬಂದ ಸಾಯಿ ಸುದರ್ಶನ್ ಅಬ್ಬರಿಸಿ ಬೊಬ್ಬಿರಿದರು. 96 ರನ್ ಬಾರಿಸಿ, ನಾಲ್ಕು ಶತಕಗಳಿಂದ ವಂಚಿತರಾದರು. ಸಿಕ್ಸರ್, ಬೌಂಡರಿಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

20 ಓವರ್ ಗಳಲ್ಲಿ ಗುಜರಾತ್ ಟೈಟಾನ್ಸ್ 20 ಓವರ್ ಗಳಿಗೆ 214 ರನ್ ಪೇರಿಸಿತು. ಇದು ಸವಾಲಿನ ಮೊತ್ತವೂ ಹೌದು. ಮಳೆ ಸುರಿಯುತ್ತಿದ್ದ ಕಾರಣ ಗುಜರಾತ್ ಟೈಟಾನ್ಸ್ ಗೆ ವರದಾನ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಆದದ್ದೇ ಬೇರೆ.

215 ರನ್ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಬೆನ್ನತ್ತಬೇಕು ಎನ್ನುವಷ್ಟರಲ್ಲಿ ಮಳೆ ಬಂತು. ಮತ್ತೆ ಪಂದ್ಯ ವಿಳಂಬವಾಯಿತು. ಒಮ್ಮೆ ಪಂದ್ಯ ಅರ್ಧಕ್ಕೆ ನಿಲ್ಲುತ್ತೆ ಎಂದು ಎಲ್ಲರೂ ಭಾವಿಸಿದ್ದರು. ಆ ಬಳಿಕ ಮಳೆ ನಿಂತಿತು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ ಗಳಿಗೆ 170 ರನ್ ಗುರಿ ನೀಡಲಾಯಿತು.

ಬ್ಯಾಟಿಂಗ್ ಆರಂಭಿಸಿದ ಸಿಎಸ್ ಕೆ (CSK) ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಹಾಗೂ ಡೆವನ್ ಕಾನ್ವೆ ಉತ್ತಮ ಜೊತೆಯಾಟ ನೀಡಿದರು. ಗುರಿ ಬೆನ್ನತ್ತುವ ಸೂಚನೆ ನೀಡಿದರು. ಗಾಯಕ್ವಾಡ್ 26 ಹಾಗೂ ಕಾನ್ವೆ 47 ರನ್ ಗಳಿಗೆ ನಿರ್ಗಮಿಸಿದರು.

ನಂತರ ಬಂದ ಶಿವಂ ದುಬೆ 32, ಅಜಿಂಕ್ ರಹಾನೆ 27, ಅಂಬಟಿ ರಾಯುಡು 19 ರನ್ ಗಳಿಸಿದರು. ಆದ್ರೆ ಅಂತಿಮ ಹಂತದಲ್ಲಿ ಮಹೇಂದ್ರ ಸಿಂಗ್ ಧೋನಿ ಕೈ ಕೊಟ್ಟರು. ಶೂನ್ಯ ಸಂಪಾದನೆ ಮಾಡಿ ನಿರ್ಗಮಿಸಿದರು. ಆಗ ಕ್ರೀಸ್ ನಲ್ಲಿದ್ದದ್ದು ರವೀಂದ್ರ ಜಡೇಜಾ. ಎಷ್ಟೋ ಪಂದ್ಯಗಳು ಸೋಲಿನತ್ತ ಸಾಗುತ್ತಿದ್ದರೂ ಗೆಲುವಿನತ್ತ ಕೊಂಡೊಯ್ದ ಕೀರ್ತಿ ಹೊಂದಿದ್ದ ಆಲ್ ರೌಂಡರ್ ಕೊನೆಯ ಓವರ್ ನಲ್ಲಿ ಒಂದು ಸಿಕ್ಸರ್, ಬೌಂಡರಿ ಬಾರಿಸುವ ಗೆಲುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪ್ರಶಸ್ತಿಗೆ ಮುತ್ತಿಡುವಂತೆ ಮಾಡಿದರು. ಸಂಕಷ್ಟದಲ್ಲಿ 15 ರನ್ ಬಾರಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ರವೀಂದ್ರ ಜಡೇಜಾ ಅವರು ಎಂಎಸ್ ಧೋನಿ ಶೈಲಿಯಲ್ಲಿ ಪಂದ್ಯ ಮುಗಿಸಿದ್ದು ವಿಶೇಷವಾಗಿತ್ತು. ಕೊನೆಯ 2 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ತಮ್ಮ 5 ನೇ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಗೆ ಕೊಂಡೊಯ್ದರು.

ಇದಕ್ಕೂ ಮೊದಲು ಎರಡು ತಂಡಗಳ ನಡುವಿನ ಪಂದ್ಯಕ್ಕೆ ಪಾಸಿಂಗ್ ಷವರ್ ಅಡ್ಡಿಪಡಿಸಿತು. ಎರಡನೇ ಇನಿಂಗ್ಸ್ ಅನ್ನು 15 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಚೆನ್ನೈ 171 ರನ್ ಗಳಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ, ಸಾಯಿ ಸುದರ್ಶನ್ (96) ಅವರು
ತಮ್ಮ ಶತಕವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು, ಗುಜರಾತ್ ಟೈಟಾನ್ಸ್ 214/4, ಐಪಿಎಲ್ ಫೈನಲ್‌ನಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು.

ಶುಭಮನ್ ಗಿಲ್ ಸರಣಿ ಸರ್ವೋತ್ತಮರಾದರೆ, ಡೆವೋನ್ ಕಾನ್ವೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

SCORESv

GUJARAT TITANS BATTING

Wriddhiman Saha c MS Dhoni b Deepak Chahar 54

Shubman Gill st MS Dhoni b Ravindra Jadeja 39

Sai Sudharsan lbw b Matheesha Pathirana 96

Hardik Pandya not out 21

Rashid Khan c Ruturaj Gaikwad b Matheesha Pathirana 0

 

 

CHENNAI SUPER KINGS BATTING

Ruturaj Gaikwad c Rashid Khan b Noor Ahmad 26

Devon Conway c Mohit Sharma b Noor Ahmad 47

Shivam Dube not out 32

Ajinkya Rahane c Vijay Shankar b Mohit Sharma 27

Ambati Rayudu c & b Mohit Sharma 19

MS Dhoni c David Miller b Mohit Sharma 0

Ravindra Jadeja not out 15

 

ನಿವೃತ್ತಿ ಬಗ್ಗೆ ಧೋನಿ ಏನಂದ್ರು..?

ನನ್ನ ನಿವೃತ್ತಿಯನ್ನು ಘೋಷಿಸಲು ಇದು ಅತ್ಯುತ್ತಮ ಸಮಯ. ಆದರೆ ನಾನು ಎಲ್ಲಾ ಕಡೆಯಿಂದ ಪಡೆದ ಪ್ರೀತಿಯಿಂದಾಗಿ ಇಲ್ಲಿಂದ ಹೊರನಡೆಯುವುದು ಸುಲಭ. ಆದ್ರೆ, ಕಷ್ಟದ ವಿಷಯವೆಂದರೆ 9 ತಿಂಗಳ ಕಾಲ ಶ್ರಮಿಸುವುದು ಮತ್ತು ಇನ್ನೊಂದು
ಐಪಿಎಲ್ ಆಡಲು ಪ್ರಯತ್ನಿಸುವುದು. ಇದು ನನ್ನಿಂದ ಉಡುಗೊರೆಯಾಗಿದೆ, ದೇಹಕ್ಕೆ ಸುಲಭವಲ್ಲ ಎಂದು ಮಹೇಂದ್ರ ಸಿಂಗ್ ಧೋನಿ (MAHENDRA SINGH DHONI)ಹೇಳಿದರು.

ಸಿಎಸ್‌ಕೆಯಲ್ಲಿ ಮೊದಲ ಆಟದಲ್ಲಿ ಎಲ್ಲರೂ ನನ್ನ ಹೆಸರನ್ನು ಜಪಿಸುತ್ತಿದ್ದರು. ನನ್ನ ಕಣ್ಣುಗಳಲ್ಲಿ ನೀರು ತುಂಬಿತ್ತು, ಪ್ರತಿಯೊಂದು ಟ್ರೋಫಿಯೂ ವಿಶೇಷವಾಗಿದೆ, ಆದರೆ ಐಪಿಎಲ್‌ನ ವಿಶೇಷತೆಯೆಂದರೆ ನೀವು ಸಿದ್ಧರಾಗಿರಬೇಕು. ಇಂದು ಎಡವಟ್ಟುಗಳಾದವು, ಬೌಲಿಂಗ್ ವಿಭಾಗವು ಕೆಲಸ ಮಾಡಲಿಲ್ಲ, ಆದರೆ ಇಂದು ಅವರ ಒತ್ತಡವನ್ನು ಬ್ಯಾಟಿಂಗ್ ವಿಭಾಗವು ತೆಗೆದುಹಾಕಿತು. ನನಗೂ ನಿರಾಸೆ ಆಗುತ್ತೆ. ನಾನು ಮನುಷ್ಯನೇ ಎಂದು ತಿಳಿಸಿದರು.

 

Exit mobile version