Site icon Kannada News-suddikshana

ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: ಸಿಗಲಿದೆ 6,000 ರೂ. ಸಹಾಯಧನ

ಸಹಾಯಧನ

SUDDIKSHANA KANNADA NEWS/ DAVANAGERE/DATE:29_08_2025

ದಾವಣಗೆರೆ: ಅಂಚೆ ಇಲಾಖೆ ವತಿಯಿಂದ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಅಂಚೆ ಚೀಟಿಗಳ ಸಂಗ್ರಹ ಉತ್ತೇಜಿಸಲು ದೀನ್ ದಯಾಳ್ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆರು ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು.

ಈ ಸುದ್ದಿಯನ್ನೂ ಓದಿ: “ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

ಮಕ್ಕಳು 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇ.50 ರಷ್ಟು ಅಂಕವನ್ನು ಗಳಿಸಿರಬೇಕು. ಕಡ್ಡಾಯವಾಗಿ ಮಕ್ಕಳು ಅಂಚೆ ಚೀಟಿ ಠೇವಣಿ ಖಾತೆಯನ್ನು ಅಥವಾ ಅಂಚೆ ಚೀಟಿ ಕ್ಲಬ್‍ನ ಸದಸ್ಯರಾಗಿರಬೇಕು.

ಅಂಚೆ ಚೀಟಿ ಬಹುಆಯ್ಕೆ ಲಿಖಿತ ಪರೀಕ್ಷೆ ಮತ್ತು ಅಂಚೆ ಚೀಟಿ ಸಂಗ್ರಹ ಪ್ರಾಜೆಕ್ಟ್‍ನ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ರೂಪಾಯಿ 6000 ವಿದ್ಯಾರ್ಥಿವೇತನ ನೀಡಲಾಗುವುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿದೆ. ದಾವಣಗೆರೆ ಶೈಕ್ಷಣಿಕ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳು ಮತ್ತು ಶಾಲೆಗಳು ಮೊ.ನಂ 8861126883 ಅಥವಾ ವೆಬ್ ಸೈಟ್ www.indiapost.gov. ಅಥವಾ www.karnatakapost.gov. ವೀಕ್ಷಿಸಬಹುದು ಎಂದು ಅಂಚೆ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.

Exit mobile version