ಬೆಂಗಳೂರು: ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಕಠಿಣ ಪರೀಕ್ಷೆಯಾದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರಿನ ಖ್ಯಾತ ತರಬೇತಿ ಸಂಸ್ಥೆ ‘ಇನ್ಸೈಟ್ಸ್ ಐಎಎಸ್‘ (Insights IAS) ಮತ್ತೊಮ್ಮೆ ತನ್ನ ಯಶಸ್ಸಿನ ಪಯಣವನ್ನು ಮುಂದುವರಿಸಿದೆ.
ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ನವದೆಹಲಿಯ ಧೋಲ್ಟುರ್ ಹೌಸ್ನಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆ ಸೇರಿದಂತೆ ಒಟ್ಟು ಮೂರು ಹಂತಗಳಲ್ಲಿ ನಡೆದ ಈ ಪರೀಕ್ಷೆಯ ಮೂಲಕ ಐಎಎಸ್, ಐಪಿಎಸ್, ಐಎಫ್ಎಸ್ ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ಒಟ್ಟು 958 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಫಲಿತಾಂಶದಲ್ಲಿ ಇನ್ಸೈಟ್ಸ್ ಐಎಎಸ್ ಪ್ರಾಬಲ್ಯ
ಗುಣಮಟ್ಟದ ಮಾರ್ಗದರ್ಶನ ಹಾಗೂ ವ್ಯವಸ್ಥಿತ ತರಬೇತಿಗೆ ಹೆಸರಾಗಿರುವ ಇನ್ಸೈಟ್ಸ್ ಐಎಎಸ್ ಸಂಸ್ಥೆಯು ಈ ವರ್ಷವೂ ಅಮೋಘ ಸಾಧನೆ ಮಾಡಿದೆ. ಸಂಸ್ಥೆಯ ಮಾರ್ಗದರ್ಶನ ಪಡೆದ 150ಕ್ಕೂ ಹೆಚ್ಚು ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಪೈಕಿ ಅಖಿಲ ಭಾರತ ಮಟ್ಟದಲ್ಲಿ 15ನೇ ರಾಂಕ್, 19ನೇ ಬ್ಯಾಂಕ್ ಸೇರಿದಂತೆ ಅನೇಕ ಉನ್ನತ ಶ್ರೇಣಿಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಅಲಂಕರಿಸಿರುವುದು ವಿಶೇಷ.
ಸಂಸ್ಥಾಪಕ ವಿನಯ್ ಕುಮಾರ್ ಜಿಬಿ ಅವರ ಸಂತೋಷ:
ಸಂಸ್ಥೆಯ ಈ ಅದ್ಭುತ ಸಾಧನೆಯ ಕುರಿತು ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಿನಯ್ ಕುಮಾರ್ ಜಿ.ಬಿ. ಅವರು ಸಂತಸ ವ್ಯಕ್ತಪಡಿಸಿದ್ದಾರೆ.
“ನಮ್ಮ ವಿದ್ಯಾರ್ಥಿಗಳ ಈ ಅಭೂತಪೂರ್ವ ಯಶಸ್ಸು ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷ ತಂದಿದೆ. ಉತ್ತರ ಬರೆಯುವ ನಿರಂತರ ಅಭ್ಯಾಸ (Answer Writing), ಗುಣಮಟ್ಟದ ಮಾರ್ಗದರ್ಶನ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಂತಿಕೆಯನ್ನು ಬೆಳೆಸುವ ಕಡೆಗೆ ನಾವು ನೀಡಿದ ಹೆಚ್ಚಿನ ಗಮನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಈ ಯಶಸ್ಸಿಗೆ ಕಾರಣಕರ್ತರಾದ ನಮ್ಮ ಎಲ್ಲಾ ಬೋಧಕ ವರ್ಗದವರಿಗೆ ಮತ್ತು ಮಾರ್ಗದರ್ಶಕರಿಗೆ (Mentors) ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದ 23 ಸಾಧಕರು:
ಈ ಬಾರಿಯ ಫಲಿತಾಂಶದಲ್ಲಿ ಕರ್ನಾಟಕದ ಅಭ್ಯರ್ಥಿಗಳ ಸಾಧನೆ ಗಮನಾರ್ಹವಾಗಿದೆ. ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಪ್ರಿಲಿಮ್ಸ್ ಹಾಗೂ ಮೇನ್ಸ್ ಟೆಸ್ಟ್ ಸರಣಿಗಳು, ಮೆಂಟರ್ಶಿಪ್ ಕಾರ್ಯಕ್ರಮ, ‘ಕೋರ್ ಬ್ಯಾಚ್’ ಮತ್ತು ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ 22 ಅಭ್ಯರ್ಥಿಗಳು ಯಶಸ್ಸಿನ ಕೀರ್ತಿ ಪತಾಕೆ ಹಾರಿಸಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
- Best IAS Coaching Bangalore
- Civil Services Exam 2025
- Insights IAS Core Batch
- Insights IAS Rankers
- Insights IAS Success
- Karnataka UPSC Results
- UPSC 2025 Results
- UPSC Personality Test 2025.
- UPSC Toppers 2025
- Vinay Kumar GB
- ಇನ್ಸೈಟ್ಸ್ ಐಎಎಸ್ ಕನ್ನಡ
- ಇನ್ಸೈಟ್ಸ್ ಐಎಎಸ್ ಸಾಧನೆ
- ಐಎಎಸ್ ಟಾಪ್ ರಾಂಕ್ಸ್
- ಕರ್ನಾಟಕದ ಯುಪಿಎಸ್ಸಿ ಸಾಧಕರು
- ನಾಗರಿಕ ಸೇವಾ ಪರೀಕ್ಷೆ 2025
- ಬೆಂಗಳೂರು ಐಎಎಸ್ ತರಬೇತಿ ಸಂಸ್ಥೆ
- ಯುಪಿಎಸ್ಸಿ 2025 ಫಲಿತಾಂಶ
- ವಿನಯ್ ಕುಮಾರ್ ಜಿಬಿ
- ಸಿವಿಲ್ ಸರ್ವಿಸ್ ರಿಸಲ್ಟ್.








Leave a comment