Site icon Kannada News-suddikshana

ದೀಕ್ಷಾಯಾತ್ರೆಗೆ ಆನ್‍ಲೈನ್ ನೋಂದಣಿ

ಆನ್‌ಲೈನ್

SUDDIKSHANA KANNADA NEWS/ DAVANAGERE/DATE:10_09_2025

ದಾವಣಗೆರೆ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಡಾ.ಬಿ.ಆರ್. ಅಂಬೇಡ್ಕರ್‍ರವರ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ನಿಯೋಜಿಸುವ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಈ ಬಗ್ಗೆ ಆನ್‍ಲೈನ್ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ.

READ ALSO THIS STORY: EXCLUSIVE: “ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕೆಂಬ” ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ವರ ಮಾತಿನ ಹಿಂದಿದೆ ರಣತಂತ್ರ!

ಸಮಾಜ ಕಲ್ಯಾಣ ಇಲಾಖೆಯ http://swd.karnataka.gov.in ವೆಬ್‍ಸೈಟ್‍ನಲ್ಲಿ ದೀಕ್ಷಾಭೂಮಿ ಯಾತ್ರೆ ಸೆ.30 ರಿಂದ ಅ.4 ರವರೆಗೆ ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ತೆರಳಲು ಆಸಕ್ತಿವುಳ್ಳವರು ಈ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಸೆ.15 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನ.

ವಿವಿಧ ಜಿಲ್ಲೆಗಳಿಂದ ಪ್ರಯಾಣಿಸಲು ಹಾಗೂ ಹಿಂದಿರುಗಿ ಬರುವ ಸಂಬಂಧ ಬಸ್ಸು ಹಾಗೂ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ ತಿಳಿಸಿದ್ದಾರೆ.

Exit mobile version